ಅನುದಿನ‌ ಕವನ-೧೨೪೩, ಹಿರಿಯ ಕವಿ:ಡಾ.ಎಂ.ಜಿ.ದೇಶಪಾಂಡೆ, ಬೀದರ್, ಕವನದ ಶೀರ್ಷಿಕೆ: ದೇವಲೋಕದ ರಂಭೆ

ದೇವಲೋಕದ ರಂಭೆ

ಜಡಿಮಳೆಯ ಸುರಿದು ಅದೊ ನಿಂತಿತು
ಎಲ್ಲೆಡೆ ನೋಡು ತಂಪು ತಂಪು|
ನಿನ್ನ ಕಂಚಿನ ಕಂಠದ ಹಾಸ್ಯ  ಅಲಾಪ
ಕೇಳಿ ಬಂತು   ಇಂಪು ಇಂಪು||

ನಿನ್ನ ಕೇಶಗಳು ತಾನಾಗಿ ಹಾರಿವೆ ಸಖಿ
ಗಾಳಿಯಲಿ ಪದರಾಗಿ ಕುಣಿದಿವೆ|
ನಿನ್ನ ಚಂದನೆಯ ಹೂವಿನಂತಹ ನಗುವು
ಕಂಡು ಈ  ಕಂಗಳು  ಮಣಿದಿದೆ ||

ನಿನ್ನ ಮೋಹದ ಚಿತ್ತಾರ ಚೆಲುವಿನಲಿ
ಭೂಮಿ  ಸಗ್ಗವಾಗಿ ನಲಿದಿದೆ|
ತೇಲಿ ಹೋಗದಿರು ಕನ್ಯೆ ದೂರಕ್ಕೆ ನೀನು
ನಿನಗಾಗಿ ನನ್ನ ಮನ ಒಲಿದಿದೆ||

ಯಾವ ಲೋಕದ ನೀನು ಅಪ್ಸರೆಯೋ
ಬಾವಲೋಕದ ಐಸಿರಿಯೊ|
ನೋವು ದುಃಖಗಳಿಲ್ಲ ನೀನಿರಲು ಬಳಿ
ದೇವಲೋಕದ ನಿ ರಂಭೆಯೊ||


-ಡಾ.ಎಂ.ಜಿ.ದೇಶಪಾಂಡೆ, ಬೀದರ್
—–