ವಿಜಯನಗರ:  21 ಮತಗಟ್ಟೆಗಳಲ್ಲಿ ಮತದಾನ,  18,233 ಮತದಾರರು ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಮಸ್ಟರಿಂಗ್ ಕಾರ್ಯ ಯಶಸ್ವಿ

ಹೊಸಪೇಟೆ (ವಿಜಯನಗರ) ಜೂ. 2: ಸೋಮವಾರ (ಜೂನ್ 3) ನಡೆಯಲಿರುವ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಕೇಂದ್ರಗಳಿಗೆ ಚುನಾವಣಾ ಸಾಮಗ್ರಿಗಳನ್ನು ಕಳುಹಿಸುವ ಮಸ್ಟರಿಂಗ್ ಕಾರ್ಯವು ಭಾನುವಾರ ವಿಜಯನಗರ ಜಿಲ್ಲೆಯ ವಿವಿಧೆಡೆ ಅಚ್ಚುಕಟ್ಟಾಗಿ ನಡೆಯಿತು.
ಈ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಿದ್ದು ಮತದಾನಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ಪಡೆದುಕೊಂಡು ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.
ಒಟ್ಟು 18,233 ಮತದಾರರು: ವಿಜಯನಗರ ಜಿಲ್ಲೆಯ 6 ತಾಲೂಕಿನ 21 ಮತಗಟ್ಟೆ ಕೇಂದ್ರಗಳಲ್ಲಿ ಜೂ. 3ರ ಬೆಳಗ್ಗೆ 8 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮಹಿಳಾ ಮತದಾರರು 6336 ಹಾಗೂ ಪುರುಷ ಮತದಾರರು 11,895 ಮತ್ತು ಇತರೆ 2 ಇಬ್ಬರು ಸೇರಿ ಒಟ್ಟು 18,233 ಮತದಾರರು ತಮ್ಮ ಮತಹಕ್ಕನ್ನು ಚಲಾಯಿಸಲಿದ್ದಾರೆ.
21 ಮತಗಟ್ಟೆಗಳಲ್ಲಿ ಮತದಾನ: ಜಿ.ಪಿ.ಜಿ. ಸರ್ಕಾರಿ ಪದವಿ ಪೂರ್ವ ಕಾಲೇಜು ರೂಂ.ನA.01 ಹೂವಿನಹಡಗಲಿ., ಜಿ.ಪಿ.ಜಿ. ಸರ್ಕಾರಿ ಪದವಿ ಪೂರ್ವ ಕಾಲೇಜ ರೂಂ.ನA.02 ಹೂವಿನಹಡಗಲಿ., ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಇಟ್ಟಿಗಿ., ವೀರಪ್ಪ ಕೊಗಪ್ಪ ಕೊಂಪಿ ಸರ್ಕಾರಿ ಪದವಿ ಪೂರ್ವ ಕಾಲೇಜ್, ಹಿರೇಹಡಗಲಿ., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮನಗರ, ಹಗರಿಬೊಮ್ಮನಹಳ್ಳಿ (ಕೊಠಡಿ-01)., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮನಗರ, ಹಗರಿಬೊಮ್ಮನಹಳ್ಳಿ (ಕೊಠಡಿ-02)., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಪಸಾಗರ., ಗ್ರಾಮ ಪಂಚಾಯತಿ ಕಚೇರಿ ತಂಬ್ರಹಳ್ಳಿ., ಗ್ರಾಮ ಪಂಚಾಯತಿ ಕಚೇರಿ, ಕೋಗಳಿ., ಸರಕಾರಿ ಪದವಿ ಪೂರ್ವ (ಬಾಲಕರ) ಕಾಲೇಜು, ಪೂರ್ವ ಭಾಗ, ಉಜ್ಜಿನಿ ರಸ್ತೆ, ಕೊಟ್ಟೂರು., ಸರಕಾರಿ ಪದವಿ ಪೂರ್ವ (ಬಾಲಕರ) ಕಾಲೇಜು., ಪೂರ್ವ ಭಾಗ, ಉಜ್ಜಿನಿ ರಸ್ತೆ, ಕೊಟ್ಟೂರು., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿ.ಬಿ.ಎಸ್.) ಚಿತ್ತವಾಡಿಗಿ, ಹೊಸಪೇಟೆ., (ಕೊಠಡಿ ನಂ 01)., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿ.ಬಿ.ಎಸ್.) ಚಿತ್ತವಾಡಿಗಿ, ಹೊಸಪೇಟೆ. (ರೂಮ್ ನಂಬರ್ 2)., ಸರ್ಕಾರಿ ಬಾಲಕೀಯರ ಪ್ರೌಢಶಾಲೆ, ಬಸ್‌ಸ್ಟ್ಯಾಂಡ್ ಹತ್ತಿರ, ಕಮಲಾಪುರ., ಸರ್ಕಾರಿ ಪ್ರೌಡಶಾಲೆ, ಮರಿಯಮ್ಮನಹಳ್ಳಿ., ತಾಲೂಕು ಪಂಚಾಯಿತಿ ಕೂಡ್ಲಿಗಿ., ಗ್ರಾಮ ಪಂಚಾಯತಿ ಕಾರ್ಯಾಲಯ, ಗುಡೆಕೋಟೆ., ಉನ್ನತಿಕರಣ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ., ಸರ್ಕಾರಿ ಜೂನಿಯರ್ ಕಾಲೇಜ್ ಹರಪನಹಳ್ಳಿ., ಸರ್ಕಾರಿ ಜೂನಿಯರ್ ಕಾಲೇಜು ಹರಪನಹಳ್ಳಿ., ಸರ್ಕಾರಿ ಜೂನಿಯರ್ ಕಾಲೇಜು, ಹರಪನಹಳ್ಳಿ (ಜೆ.ಒ.ಸಿ. ಹಾಲ್)ನಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.