ಅನುದಿನ ಕವನ-೧೨೫೭, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ

ಎಲ್ಲಿ ಹೋದಳೋ ಅವಳು
ಭಾವಗಳ ಜೊತೆಯಲ್ಲೇ ಇರುವೆನೆಂದವಳು
ನೀನಲ್ಲದೇ ಬೇರೇನಿಲ್ಲವೆಂದವಳು
ನೀನೇ ನಾನೆಂದವಳು
ಚೈತ್ರದ ಚಿಗುರಿನಲಿ ಜೊತೆಗಿದ್ದವಳು

ಇದೀಗ ಅದೇ ನೋವಿನಲಿ
ಅನುದಿನವೂ  ಕೂಗಿ ಕರೆಯುತಿಹೆನು
ಅವಳಿಗದು ಕೇಳುವುದೋ ಇಲ್ಲವೋ
ಉಳಿದ ಕೇಳುಗರೆಲ್ಲ ಮಾತ್ರ
ಆಹಾ ! ಕೋಗಿಲೆಯ ಕಂಠವೇ
ಎಂದು ಹೊಗಳುತಿಹರು
ನನ್ನೊಳಗಿನ ನೋವ ಅವರೆತ್ತ ಬಲ್ಲರು ?

-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
——–