ಅನುದಿನ ಕವನ-೧೨೫೮, ಕವಿ: ಮರುಳಸಿದ್ದಪ್ಪ ದೊಡ್ಡಮನಿ, ಹುಲಕೋಟಿ, ಗದಗ,, ಕಾವ್ಯ ಪ್ರಕಾರ: ಶಾಹಿರಿ

ಶಾಯಿರಿ


ವಿಳಾಸವಿಲ್ಲದ ಊರಿನಲ್ಲಿ ವಾಸ್ತವ್ಯ ನನ್ನದು
ಹುಡುಕಾಡಬೇಡ ಗೆಳತಿ
ಅಲ್ಲಿ ಗೋರಿಗಳ ಮನೆಗಳೆ ಹೆಚ್ಚು  ನನ್ನದು ನಿನ್ನ ಹೆಸರಿನ ಆ ಗೂಡು.


ಕೆನ್ನೆಯ ಮೇಲೆ ಜಾರಿದ ಹನಿಗೆ
ನಾನೆಂದೂ ಸಾಕ್ಷಿಯಾಗಲಾರೆ
ಅದು ನನ್ನ ನೆನಪಿನ ಒರತೆ ಜೀನುಗಿರಬಹುದಲ್ಲವೆ?


ಸಾವಿನ ಮನೆಯ ಕದ ತಟ್ಟಿದವ ನಾನು
ಇಲ್ಲಿಯ ಹಂಗಿನರಮನೆಯ
ಹಂಗು ಹರಿದಿದ್ದು ನಿನಗೂ ತಿಳಿದಿದೆ
ಮುಂದೊಂದಿನ ನಾ ನೆನಪು ಮಾತ್ರ.


ನಿನ್ನ ಕಣ್ಣಿನ ಬಾಣ ಎಷ್ಟು ಹರಿತ
ನೂರು ಗಂಡಿನ ಎದೆಯ ಸೀಳಿದೆ
ನಿನ್ನಷ್ಟು ಗಟ್ಟಿಗರಲ್ಲ ಗಂಡಸರು
ಆ ನೋಟಕ್ಕೆ ಮೆತ್ತಗಾದದ್ದಂತೂ ಸತ್ಯ ಸತ್ಯ.

-ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ
——-