ಅನುದಿನ ಕವನ-೧೨೫೯, ಕವಿ: ರವೀ ಹಂಪಿ, ಕಾವ್ಯ ಪ್ರಕಾರ: ಗಜಲ್

ಗಜಲ್
ಹೂವು ಅರಳುವ ಸಂಭ್ರಮ….

ಹೂವಿನ ಸಂಭ್ರಮ, ಸಂಜೆ ಕಮರುವುದು ಸಹಜ
ಮಳೆಯ ಸಂಭ್ರಮ, ಭಾಷ್ಪವಾಗುವುದು ಸಹಜ

ದಕ್ಕದ ಪ್ರೇಮ ಕನವರಿಕೆಯಾಗುವುದು ಸಹಜ
ಕುಕ್ಕಿ ಇಕ್ಕಿದ ಕೂಳು ವಿಷವಾಗುವುದು ಸಹಜ

ಸುಟ್ಟುದನೇ ಸುಟ್ಟರೆ ಪುಡಿಯಾಗುವುದು ಸಹಜ
ಕಾಲ ಮೀರಿದರೆ ಖುಷಿಯೂ ಮರೆವುದು ಸಹಜ

ಬೆಳಕು ತೋರಿದರೆ, ಅತಿಬೆಳಕು ಕುರುಡಾಗಿಸುವುದು
ನೀತಿ ಹಿತವಾದರೆ ಅತಿನೀತಿ  ಸುಡುವುದು ಸಹಜ

ಇಚ್ಚೆಯಂತೆ ಹರಿದ ನದಿ ಅಮೃತವಾಗುವುದು
ರವಿಯ ಅರಿತರೆ ಒಲುಮೆ ದಕ್ಕುವುವುದು ಸಹಜ

-ರವೀ ಹಂಪಿ
—–