ಸೊಸೈಟಿ ಎಂಬ ಸಗ್ಗ
ಯಾರೇ ಏನಂಬ್ಲಿ
ಸೊಸೈಟಿ ಎಂಬದು
ಬಡವರ ಪಾಲಿಗೆ
ಅಗ್ಗವೂ ಭೂ ಸಗ್ಗವೂ
ಕಟಂಬ್ಲಿ ಕಂಡುಂಡ
ಕಂದಮ್ಮಗಳು ನಾವು
ಸೊಸೈಟಿ ಎಂಬದೊಂದು
ಸೈಟಿಂಗ್ ಆಗದಿದ್ರೆ
ಅನ್ನ ಎಂಬುದು
ಪೇಟಿಂಗ್ನಲ್ಲಿ ಕಾಂಬುವಂತವರು
ಚೀಟಿ ಸೀರಿ
ಸೈನ್ ಬಟ್ಟಿ
ತೇರಿನ ಹಬ್ಬಕ್ಕೆ
ಅಸೈನ್ಮೆಂಟ್ಗಳು
ಅನ್ನ ಎಂಬುದು
ಮೇಜರ್ ಹಬ್ಬಗಳಿಗೆ
ಹಾಜರಾದರೆ
ದೊಡ್ಮನೆ ತಿಥಿಗಳಲ್ಲಿ
ಥಳ ಥಳ ಹೊಳೆಯುವುದ ಕಂಡು
ಹಿರಿ ಹಿರಿ ಹಿಗ್ಗಿ ಹುಗ್ಗಿ ಹೊಡೆದವರು
ಮುಗ್ಗೆಂಬುದು
ಅಕ್ಕಿಯ ಜಿನಟಿಕ್ ಅಂಶವೆಂದು
ಬಗೆದವರು,
ಉಂಡೆ ಹುಳುಗಳನ್ನು ಕಂಡು
ಅವೂ ಉಣಬೇಕಲ್ಲವೆ
ಎಂದು ಮರುಕಪಟ್ಟವರು
ಯಾರೇ ಏನಂಬ್ಲಿ
ಸೊಸೈಟಿ ಎಂಬುದು……
-ಶಿಶಬ(ಶಿವಶಂಕರ ಬಣಗಾರ), ಹೊಸಪೇಟೆ
—–
ಶಿಶಬ ಅವರ ಕವನ ತುಂಬಾ ಚೆನ್ನಾಗಿದೆ 👌☺️