ಅನುದಿನ ಕವನ-೧೨೭೬, ಕವಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು

ಯಶದ ಬೆನ್ನೇರಿ
ಸಂತಸದ ನಲಿವಿರಲು,
ಹರುಷದ ನೆಲೆಯಿರಲು,
ಸೊಗಸಿನಾ ಹೊನಲಿರಲು,
ನನ್ನವರೇ ಎಲ್ಲರೂ.

ಯಶವಿಲ್ಲದಂದು,
ದೆಸೆಯಿಲ್ಲದಂದು,
ಕಗ್ಗಪ್ಪ ಸುಳಿಯಲ್ಲಿ
ಮನ ಸಿಲುಕಿ ನೊಂದಂದು,
ದುಃಖದ ಮಡುವಲ್ಲಿ ಎದೆ
ಹುದುಗಿದಂದು,
ನನ್ನವರು ಯಾರಿಲ್ಲವು…
ನನದೇ ನೆರಳೂ ನನದಲ್ಲವು.

ನಾನು ನನ್ನದು ಎಂಬುದ ಮಾಣಿಸಿ
ನಿನ್ನತ್ತ ಸೆಳೆದುಕೋ.
ಬೇಡುವೆ ಅನವರತ
ಇಬ್ಬನಿಯ ಒಡೆಯಾ.


-ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು
—–