ಅನುದಿನ ಕವನ-೧೨೮೨, ಹಿರಿಯ ಕವಿ: ಎಂ.ಎಸ್.ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಮಳೆ ಪದ್ಯ

ಮಳೆ ಪದ್ಯ..

ಮಧ್ಯಾಹ್ನದ ಬಿಸಿಲು
ಇರುವಾಗಲೆ,
ಮೋಡಗಳು ಸುತ್ತುವರಿದು
ಮಳೆಯ ನೆರಳು.

ಹಗುರ ಮಳೆ ಮೈ ಮೇಲೆ
ಜಾರುತ್ತಿದ್ದಂತೆ
ಕಣ್ಣೆದುರಿನ ಕ್ಷಣಗಳು ಅದಾಗಲೆ
ನೆನಪುಗಳು.

ಸಾಂತ್ವನ ಹೇಳುತ್ತ
ತಬ್ಬಿ ಹಿಡಿದ ಒಂದೊಂದು ಮಳೆ ಹನಿಗೂ
ಮಿಡಿಯುವ
ನನ್ನ ಹೃದಯ ಬಡಿತ.

ಮಳೆಯಲಿ
ಕೊಚ್ಚಿ ಹೋಗಲಿ ನೋವು
ಉಳಿಯಲಿ ನೆನಪು.

  1. -ಎಂ.ಎಸ್.ರುದ್ರೇಶ್ವರಸ್ವಾಮಿ, ಬೆಂಗಳೂರು