ಕವಿತೆಗಳು
ಜೀತಕ್ಕಿಟ್ಟುಕೊಂಡಿದ್ದವು.
ಬಿಡುಗಡೆ ಮಾಡಿಬಿಟ್ಟವೇ?
ಸರಳುಗಳ
ನಡುವೆ ಪದಗಳ ನಿರೀಕ್ಷೆ
ಬೀಟ್ ಮನಸ್ಸಿನ
ಲಾಟಿ ಶಬ್ದಕ್ಕೆ
ತವಕವಿರಿಸಿಕೊಂಡಿದ್ದೆ
ನಾಲ್ಕು ಗೋಡೆಗಳ
ನಡುವೆ ಜಗವನ್ನೇ
ಹರಡಿಕೊಂಡಿದ್ದೆ
ಪ್ರತಿ ಗೋಡೆಯಲ್ಲೂ
ನಿನ್ನದೆ ಪ್ರತಿಬಿಂಬ
ಗೀಚಿ ಕೊಂಡ
ಮಾರ್ಕುಗಳ ಶಾಶ್ವತತೆ
ಬಣ್ಣಗಳ ಬಳೆದರೂ
ಅಳಿಯದು
ಮಲಗಿ ಎದ್ದವನಿಗೆ
ಕಿರಣಗಳು ಕಣ್ಣಿಗೆ
ಸಿಗದಂತೆ ಇದ್ದರೂ
ಭರವಸೆ ಬೆಳಕು
ಉರಿಯುತ್ತಿತ್ತು
ಬಯಸಿದಾಗಲೆಲ್ಲ
ಕವಿತೆಗಳ ಗುಚ್ಛ
ನೀಡುತ್ತಿದ್ದವನಿಗೆ
ಇತ್ತೀಚಿಗೆ ಯಾಕೋ
ಬಿಡುಗಡೆ ಮಾಡಿಬಿಟ್ಟಿವೆ
-ಲೋಕಿ(ಲೋಕೇಶ್ ಮನ್ವಿತಾ) ಬೆಂಗಳೂರು
——