ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಸದಸ್ಯರಾಗಿ ಡಾ.ದಸ್ತಗೀರಸಾಬ್ ದಿನ್ನಿ ನೇಮಕ

ಬಳ್ಳಾರಿ, ಜು. 13: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯರಾಗಿ ಸಾಹಿತಿ ರಾಯಚೂರಿನ ಡಾ. ದಸ್ತಗಿರಸಾಬ್ ದಿನ್ನಿ ಅವರು ನೇಮಕವಾಗಿದ್ದಾರೆ.

ಬಳ್ಳಾರಿ ನಗರದ ಎಸ್.ಎಸ್.ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.‌ದಿನ್ನಿ‌ಅವರು ಕವಿತೆ, ಗಜಲ್, ವಿಮರ್ಶೆ, ವೈಚಾರಿಕ ಲೇಖನ ಮುಂತಾದ ಪ್ರಕಾರಗಳ ಮೂಲಕ ಗಮನ ಸೆಳೆದಿದ್ದಾರೆ. ಈವರೆಗೆ ಹದಿನೆಂಟು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಅಭಿನಂದನೆ: ಕನಕದಾಸ ಅಧ್ಯಯನ ಕೇಂದ್ರದ ಸದಸ್ಯರಾಗಿ ನೇಮಕವಾಗಿರುವ ಡಾ.ದಸ್ತಗೀರಸಾಬ್ ದಿನ್ನಿ ಅವರನ್ನು ಎಸ್.ಎಸ್.ಎ ಸರಕಾರಿ ಪ್ರಥಮ ದರ್ಜೆ
ಕಾಲೇಜಿನ ಪ್ರಾಚಾರ್ಯ ಡಾ.‌ಹೆಚ್ ಕೆ. ಮಂಜುನಾಥ ರೆಡ್ಡಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಸಾಹಿತಿಗಳಾದ ರಾಯಚೂರಿನ ಡಾ. ಚಿದಾನಂದ ಸಾಲಿ, ಡಾ.‌ವೈ. ಬಿ. ಹಾಲಬಾವಿ ಮತ್ತಿತರರು ನೇಮಕವನ್ನು ಸ್ವಾಗತಿಸಿ ಅಭಿನಂದಿಸಿದ್ದಾರೆ.
*****