ಗದಗಿನಲ್ಲಿ ನ.23,  24 ರಂದು ‘ದಲಿತ ಚಳವಳಿಗೆ-50 ರಾಷ್ಟ್ರೀಯ ಸಮಾವೇಶ’ -ಬಸವರಾಜ ಸೂಳಿಬಾವಿ

ಬಾಗಲಕೋಟೆ: ಬರುವ ನವೆಂಬರ್ 23 ಮತ್ತು 24ರಂದು ಗದಗ ನಗರದಲ್ಲಿ ‘ದಲಿತ ಚಳವಳಿಗೆ-50 ರಾಷ್ಟ್ರೀಯ ಸಮಾವೇಶ’ವನ್ನು ಕರ್ನಾಟಕ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಲಾಗಿದೆ. ಎಂದು ಗದಗ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ ತಿಳಿಸಿದರು.                                                  ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್‌ನಲ್ಲಿ ನಡೆಯುವ ರಾಷ್ಟ್ರೀಯ ದಲಿತ ಸಮಾವೇಶಕ್ಕೆ ಪ್ರಕಾಶ ಅಂಬೇಡ್ಕರ್, ರಮಾಬಾಯಿ ಅಂಬೇಡ್ಕರ್, ಮಠಾಧೀಶರು, ಪ್ರಗತಿಪರ ರಾಷ್ಟ್ರ ಮತ್ತು ರಾಜ್ಯದಲ್ಲಿರುವ ಚಿಂತಕರನ್ನು ಆಹ್ವಾನಿಸಲಾಗುವುದು.ಎಲ್ಲ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಗ್ಗೂಡಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ದಲಿತ ಚಳವಳಿಯ ಸ್ಥಾಪಕ ಕೃಷ್ಣಪ್ಪ ಅವರು ಗದಗ ನಗರದಲ್ಲಿ ಕೊನೆಯುಸಿರೆಳೆದಿದ್ದ ಜಾಗದಲ್ಲಿಯೇ ಸಮಾವೇಶ ನಡೆಯಲಿದೆ. ಶೋಷಿತರ ಪರವಾಗಿ ಧ್ವನಿ ಎತ್ತುವ ಸಲುವಾಗಿ ಹಾಗೂ ಎಲ್ಲರೂ ಸಮಾನರು ಎಂದು ದಲಿತ ಚಳವಳಿ ನಡೆದಿದ್ದು ಡಾ.ಬಿ.ಆರ್. ಅಂಬೇಡ್ಕರ ಕಾಲದಿಂದಲೂ ಚಳುವಳಿ ನಡೆದಿದೆ. ಆ ಕಾಲದಲ್ಲಿ ಅವರು ಚಳವಳಿಗೆ ದೊಡ್ಡ ಶಕ್ತಿ ತುಂಬಿದ್ದಾರೆ ಎಂದರು.  ಭಾರತದಲ್ಲಿ ಹಲವು ಭಾರತಗಳಿವೆ. ಭಾರತದಲ್ಲಿ ಏಕತೆಯ ಭಾವನೆಯ ಭಾರತ ಇಲ್ಲ. ಶ್ರೇಷ್ಠತೆಯ ಭಾರತ ಒಂದು ಕಡೆಯಾದರೆ ಕನಿಷ್ಠತೆಯ ಭಾರತ ಇನ್ನೊಂದು ಕಡೆ ಇದೆ. ಹೀಗಾಗಿ ಭಾರತದಲ್ಲಿ ಸಮಾನತೆ ಬರುತ್ತಿಲ್ಲ. ಇನ್ನೂ ಅಸಮಾನತೆ ಜೀವಂತಿಕೆಯಾಗಿದೆ. ಇದನ್ನು ಹೋಗಲಾಡಿಸಲು ಸರ್ಕಾರದ ಇಚ್ಛಾಶಕ್ತಿ ಬೇಕಾಗಿದೆ. ಸರ್ಕಾರವನ್ನು ಎಚ್ಚರಿಸಲು ಸಹ ಸಮಾವೇಶದಲ್ಲಿ ದೊಡ್ಡಮಟ್ಟದ ಚರ್ಚೆ ನಡೆಸಲಾಗುವುದು ಎಂದು ಹೇಳಿದರು .

ಸ್ವಾತಂತ್ರ್ಯ ಸಿಕ್ಕು 80 ವರ್ಷವಾದರೂ ಏಕತೆಯ ಭಾರತ ಆಗಿಲ್ಲ, ನಮ್ಮ ದೇಶದಲ್ಲಿ ಸಮಾನತೆಯನ್ನು ಹೊಂದದಿರುವುದು ಬೇಸರದ ಸಂಗತಿಯಾಗಿದೆ. ಈಗಲೂ ಶ್ರೇಷ್ಠ ಕನಿಷ್ಟ ಎಂಬ ಮನೋಭಾವ ಇರುವ ದುಸ್ಥಿತಿಯ ಭಾರತ ಇದೆ ಎಂದರು.                                        ದಲಿತ ಚಳವಳಿಗೆ ಐತಿಹಾಸಿಕ ಪರಂಪರೆಯಿದೆ. ದಲಿತರನ್ನು ಒಗ್ಗೂಡಿಸಲು ಹಾಗೂ ಸಮಾನತೆಯನ್ನು ತರಲು ಕಾರ್ಯಕ್ರಮ ನಡೆಯಲಿದೆ. ಬಸವಣ್ಣನ ನಾಡಿನಲ್ಲಿರುವ ನಾವೆಲ್ಲರೂ ಸಮಾನರು ಎಂದು ಹೇಳುವ ಸಂಘಟನೆಗಳು ಸಮಾನತೆಯ ಜೀವನ ನಡೆಸಲಾಗುತ್ತಿದೆಯೇ, ಹೀಗೆ ಹತ್ತು ಹಲವು ವಿಚಾರಗಳನ್ನು ಇಟ್ಟುಕೊಂಡು ರಾಷ್ಟ್ರೀಯ ಸಮಾವೇಶದಲ್ಲಿ ಚರ್ಚಿಸಲಾಗುವದು ಎಂದರು.                      ಟಿ.ರತ್ನಾಕರ, ಶರೀಫ ಬಿಳಿಯಲೆ,ಅನೀಲ ಹೊಸಮನಿ, ಶ್ರೀಶೈಲ ಅಂಟಿನ, ಸುಖರಾಜ ತಾಳಗೇರಿ, ಸಿದ್ಧಾರ್ಥ ಸಿಂಗೆ ಪತ್ರಿಕಾಗೋಷ್ಠಿಯಲ್ಲಿದ್ದರು.

ಸಭೆ: ನಂತರ ವಿದ್ಯಾಗಿರಿಯಲ್ಲಿ ಇರುವ ನೂತನ ಪ್ರವಾಸಿ ಮಂದಿರದಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಮುಖಂಡರಗಳ ಸಭೆ ಜರುಗಿತು.  ಸಮಾವೇಶದ ಸಿದ್ದತೆ ಬಗ್ಗೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.      ಕರ್ನಾಟಕದಲ್ಲಿ ಬಾಬಾಸಾಹೇಬರು ಭೇಟಿ ನೀಡಿರುವ ಪ್ರದೇಶಗಳ ವಿವರಗಳ ಸಂಗ್ರಹವನ್ನು ಮಾಡಿ ಅದನ್ನು ಪುಸ್ತಕ ರೂಪದಲ್ಲಿ ತರಲು ತೀರ್ಮಾನಿಸಲಾಯಿತು. ಹಾಗೆಯೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಲಿತ ಚಳುವಳಿ ನಡೆದು ಬಂದ ದಾರಿಗಳ ಕುರಿತು ವಿವರವಾದ ಸಂಗ್ರಹದ ಜವಾಬ್ದಾರಿಯನ್ನು ಪ್ರತಿ ಜಿಲ್ಲೆಗಳಲ್ಲಿ ಇಬ್ಬರು ಮುಖಂಡರಿಗೆ ಈ ಎರಡು ಉದ್ದೇಶಗಳನ್ನು ನೇರವೇರಿಸುವ ಜವಾಬ್ದಾರಿ ಹೊರಿಸಲಾಯಿತು.                                        ಬಸವರಾಜ ಸೂಳಿಭಾವಿ, ಅನೀಲ ಹೊಸಮನಿ, ಶರೀಫ್, ಮೈನೂದ್ದೀನ್ ರೇವಡಿಗಾರ,ಸದಾಶಿವ ಕೆಂಭಾವಿ, ಬಸವರಾಜ ಹಳ್ಳದಮನಿ,ಮುಂತಾದವರು ಮಾತನಾಡಿದರು.                                          ಸಭೆಯಲ್ಲಿ ವಿವಿಧ ಜಿಲ್ಲೆಗಳ  ಮುಖಂಡರು ಸೇರಿದಂತೆ ಬಾಗಲಕೋಟೆಯ ಮುಖಂಡರಾದ ಶ್ತೀಶೈಲ ಅಂಟೀನ, ಜೈ ಭೀಮ, ಸಿದ್ದರಾಜ ಸೊನ್ನದ ಮೊದಲಾದವರು ಇದ್ದರು.