ದಸಾಪ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ.ನಾಗಪ್ಪ ಬಿ.ಈ ನೇಮಕ

ಬಳ್ಳಾರಿ ಜು.21: ದಲಿತ ಸಾಹಿತ್ಯ ಪರಿಷತ್ತಿನ(ದಸಾಪ) ಬಳ್ಳಾರಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ನಾಗಪ್ಪ ಬಿ.ಈ. ಅವರು ನೇಮಕವಾಗಿದ್ದಾರೆ.
ದಸಾಪ ರಾಜ್ಯಾಧ್ಯಕ್ಷ ಡಾ.‌ಅರ್ಜುನ ಗೊಳಸಂಗಿ ಅವರು ಯುವ ಸಂಘಟಕ ಡಾ. ನಾಗಪ್ಪ ಅವರನ್ನು ನೇಮಿಸಿ ಆದೇಶ ಪತ್ರ ನೀಡಿದ್ದಾರೆ.
ಪರಿಚಯ: ನಗರದ ಸರಳಾದೇವಿ ಸರಕಾರಿ ಪದವಿ ಕಾಲೇಜು, ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿರುವ ಡಾ. ನಾಗಪ್ಪ ಅವರು ‘ದೇವದಾಸಿ
ಮಹಿಳೆಯರ ಸಮಸ್ಯೆ ಮತ್ತು ಸವಾಲುಗಳು: ಒಂದು ಸಮಾಜಶಾಸ್ತ್ರೀಯ ಅಧ್ಯಯನ’ ವಿಷಯದ
ಕುರಿತು ವಿಎಸ್ ಕೆ ವಿವಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ
ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಸೇರಿದಂತೆ ಹಲವು ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
ಅಭಿನಂದನೆ: ಡಾ.‌ನಾಗಪ್ಪ ಅವರ ನೇಮಕವನ್ನು ಸ್ವಾಗತಿಸಿರುವ ದಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಸಿ.ಮಂಜುನಾಥ್,  ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ. ಟಿ.‌ದುರುಗಪ್ಪ , ಕುರುಗೋಡು ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ರಾಮಕೃಷ್ಣ ಹೆಚ್, ತೆಕ್ಕಲಕೋಟೆ ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಮೋಕ, ಅತಿಥಿ ಉಪನ್ಯಾಸಕರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಮುಖಂಡರುಗಳಾದ ಡಾ. ಕೆ.‌ಬಸಪ್ಪ, ಡಾ. ರಾಮಯ್ಯ, ಡಾ.‌ಹನುಮೇಶ್ ಹೆಚ್, ಸಿದ್ದೇಶ್ ಡಿ, ಗುರುರಾಜ್, ರುದ್ರಮುನಿ, ಎಂ. ರಫಿ, ಮಾರೆಪ್ಪ ಎ ಕೆ, ರಮೇಶ್ ಎಸ್.ಎಂ, ಸಿರುಗುಪ್ಪ ಸರಕಾರಿ ಪದವಿ ಕಾಲೇಜಿನ ಸಹಾಯಕ‌ ಪ್ರಾಧ್ಯಾಪಕ ಡಾ. ಚಂದ್ರಕಾಂತ್ ಕೆ ಎಂ ಮತ್ತಿತರರು ಅಭಿನಂದಿಸಿದ್ದಾರೆ.                                                     ——-