ರಾಷ್ಟ್ರದ ಐಕ್ಯತೆ ಮತ್ತು ಹಳ್ಳಿಗಳ ಅಭಿವೃದ್ಧಿ ರಾಷ್ಟ್ರೀಯ ಸೇವಾ ಯೋಜನೆಗಳಿಂದ ಸಾಧ್ಯ -ಕುಲಪತಿ ಪ್ರೊ ಜೆ ತಿಪ್ಪೇರುದ್ರಪ್ಪ.               

ಬಳ್ಳಾರಿ, ಜು.24: ರಾಷ್ಟ್ರದ ಐಕ್ಯತೆ ಮತ್ತು ಹಳ್ಳಿಗಳ ಅಭಿವೃದ್ಧಿಯನ್ನು ರಾಷ್ಟ್ರೀಯ ಸೇವಾ ಯೋಜನೆಗಳಿಂದ ನೆರವೇರಿಸಲು ಸಾಧ್ಯ ಎಂದು ವಿ ಎಸ್ ಕೆ ವಿವಿ ಕುಲಪತಿ   ಪ್ರೊ ಜೆ ತಿಪ್ಪೇರುದ್ರಪ್ಪ  ಅವರು ತಿಳಿಸಿದರು.

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ  ಸತ್ಯಂ ಬಿಇಡಿ ಕಾಲೇಜಿನ
ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಸಿ ಅವರು ಮಾತನಾಡಿದರು.
ಪ್ರಶಿಕ್ಷಣಾರ್ಥಿಗಳಿಗೆ ಸಾಮಾಜಿಕ ಕಳಕಳಿ, ರಾಷ್ಟ್ರದ ಐಕ್ಯತೆ ಮತ್ತು ಹಳ್ಳಿಗಳ ಅಭಿವೃದ್ಧಿಯನ್ನು ರಾಷ್ಟ್ರೀಯ ಸೇವಾ ಯೋಜನೆಗಳಿಂದ ನೆರವೇರಿಸಲು ಸಾಧ್ಯ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾ.ಸೇ.ಯೋ ಕೋಶದ ಸಂಯೋಜನಾ ಅಧಿಕಾರಿ ಡಾ ಕುಮಾರ್ ಅವರು, ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಲು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸತ್ಯಂ ಬಿಇಡಿ ಕಾಲೇಜಿನ ಪ್ರಾಂಶುಪಾಲರು ಹಾಗೂ  ವಿಶ್ವವಿದ್ಯಾಲಯದ  ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಲಹಾ ಸಮಿತಿ ಸದಸ್ಯ ಡಾ ಅಶ್ವ ರಾಮು, ವಿದ್ಯಾರ್ಥಿಗಳಿಗೆ ಸ್ವಚ್ಛತೆ ಅಭಿಯಾನ, ಸಾಮಾಜಿಕ ಮೌಲ್ಯಗಳನ್ನು ತೊಲಗಿಸಿ ಸಮ ಸಮಾಜವನ್ನು ಕಟ್ಟಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಜಯದೇವಯ್ಯ ಎಂ ವಿ, ನಾಗೇಶ್ ಬಾಬು ಎ, ಗಿರಿಜಾ , ಅನುಷಾ, ಅಶ್ವಿನಿ, ನೀಲಕಂಠ ಕೆ, ಸುಲೋಚನಾ, ಚಂದ್ರಶೇಖರ್, ಹರೀಶ್ ಅವರು ಉಪಸ್ಥಿತರಿದ್ದರು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ರಾಸೇಯೋ ಕಾರ್ಯಕ್ರಮ ಅಧಿಕಾರಿ ಆಲಂಭಾಷ ಅವರು ಸ್ವಾಗತಿಸಿದರು.  ಪ್ರಶಿಕ್ಷಣಾರ್ಥಿಗಳಾದ ಗುರುರಾಜ್ ಸಜ್ಜನ್ ಮತ್ತು ಸಂಗೀತ ಸುಕನ್ಯಾ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಆರ್ ಚಂದ್ರು ಶೇಖರ್ ವಂದಿಸಿದರು.
—–