ಕುರುಗೋಡು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ: ದಲಿತರ ಪ್ರಗತಿಗೆ ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟು ಹಾಗೂ ಜಾಗತೀಕರಣ ಕಾರಣ -ಚಿಂತಕ ಡಾ.‌ಹೊನ್ನೂರಾಲಿ ಐ ಅಭಿಮತ

ಕುರುಗೋಡು(ಬಳ್ಳಾರಿ ಜಿ.), ಆ.11: ಸಮಕಾಲೀನ ದಲಿತರ ಪ್ರಗತಿಗೆ ಎರಡು ಪ್ರಮುಖ ಬಿಕ್ಕಟ್ಟುಗಳು ಕಾರಣವಾಗಿವೆ ಎಂದು ಬಳ್ಳಾರಿಯ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಚಿಂತಕ ಡಾ. ಹೊನ್ನೂರಾಲಿ ಐ ಅವರು ಅಭಿಪ್ರಾಯ ಪಟ್ಟರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ದಲಿತ ಸಾಹಿತ್ಯ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ಮತ್ತು ಸಮಕಾಲೀನ ದಲಿತರು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟು ಹಾಗೂ ಜಾಗತೀಕರಣ ದಲಿತರ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಉದಾಹರಣೆ ಸಮೇತ ವಿಶ್ಲೇಷಿಸಿದರು.
ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟುಗಳ ಪರಿಹಾರಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ದಲಿತರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಧರ್ಮ ನಿರಪೇಕ್ಷ ಕಟ್ಟುವಲ್ಲಿ ವಿಫಲರಾಗಿದ್ದೇವೆ ಎಂದು ವಿಷಾಧಿಸಿದ ಡಾ.‌ಹೊನ್ನೂರಾಲಿ ಅವರು ಜಾಗತೀಕರಣ ಹಾಗೂ ಪಟ್ಟಭದ್ರರ ಹಿತಾಸಕ್ತಿಯಿಂದಾಗಿ ದಲಿತರ ಮೀಸಲಾತಿ ಹಾಗೂ ಸರಕಾರಿ ಉದ್ಯೋಗಕ್ಕೆ ಧಕ್ಕೆ ಬಂದಿದೆ ಎಂದರು.
ಖಾಸಗಿ ಸಂಸ್ಥೆಗಳಲ್ಲಿ‌ ಮೇಲ್ವರ್ಗದ ಬಿಗಿ ಹಿಡಿತ ಹೊಂದಿದ್ದು ತಳ‌, ಶೋಷಿತ ಸಮುದಾಯಗಳಿಗೆ ಉದ್ಯೋಗಗಳು ‌ಮರೀಚಿಕೆಯಾಗುತ್ತಿವೆ. ಈ ನಿಟ್ಟಿನಲ್ಲಿ ಸಮುದಾಯ ಎಚ್ಚೆತ್ತು ಕೊಳ್ಳಬೇಕಿದೆ ಎಂದು ತಿಳಿಸಿದರು.
ದಲಿತ ಯುವಜನತೆ ತಮ್ಮದಲ್ಲದ ಸಂಸ್ಕೃತಿಯ  ಭಾಗವಾಗುತ್ತಿರುವುದು  ಕೂಡಾ ಹಲವು ಸಮಸ್ಯೆಗಳ ಹುಟ್ಟಿಗೆ ಕಾರಣ ಎಂದು ಹೇಳಿದರು.
ದಲಿತ ಸಾಹಿತ್ಯ ಪರಿಷತ್ತು ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ ಮೂಲಕ ಡಾ. ಅಂಬೇಡ್ಕರ್, ಜ್ಯೋತಿಬಾಪುಲೆ, ಪೆರಿಯಾರ್, ಡಾ.‌ಜಗಜೀವನರಾಮ್ ಅವರ ಚಿಂತನೆಗಳನ್ನು ಯುವಜನತೆಯ ಮನಸುಗಳಲ್ಲಿ ಬಿತ್ತಬೇಕು ಎಂದು ಸಲಹೆ‌ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ‌ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.‌ಹೆಚ್. ರಾಮಕೃಷ್ಣ ಅವರು ಮಾತನಾಡಿ,  ಯುವ ಸಮುದಾಯದಲ್ಲಿ ವೈಚಾರಿಕತೆ ಮೂಡಿಸುವ ಜವಾಬ್ದಾರಿ ದಸಾಪ ನೂತನ‌ ಅಧ್ಯಕ್ಷ ನಾಗಪ್ಪ ಮತ್ತು ಪದಾಧಿಕಾರಿಗಳ ಮೇಲಿದೆ. ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ‌ಗಳನ್ನು ಆಯೋಜಿಸಿ ಅಂಧ ಶ್ರದ್ಧೆ, ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸ ಬೇಕು ಎಂದ ಅವರು ದಸಾಪ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸದಾ ತಾವು ಸಹಕಾರ ನೀಡುವುದಾಗಿ ತಿಳಿಸಿದರು.


ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದ ತೆಕ್ಕಲಕೋಟೆ ಸರಕಾರಿ ಪ್ರಥಮನದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹೆಚ್ ಮೋಕ ಅವರು, ಬಹು‌ಸಂಸ್ಕೃತಿಯ ಈ ನೆಲ ನಿಂತ ‌ನೀರಾಗಬಾರದು. ಈ ನಿಟ್ಟಿನಲ್ಲಿ‌ ದಸಾಪ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಬೇಕು. ಪರಿಷತ್ತಿನಲ್ಲಿ
ಪ್ರಗತಿಪರ ದಲಿತೇತರಿಗೂ ಸದಸ್ಯತ್ವ ನೀಡಬೇಕು ಎಂದು ಕೋರಿದರು.


ವಿಎಸ್ ಕೆ ವಿವಿಯ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ರಾಜೇಂದ್ರ ಪ್ರಸಾದ್, ಡಾ. ಕುಮಾರ್, ಡಾ. ವಿಜಯಕುಮಾರ್, ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ,  ಕರ್ನಾಟಕ ರಾಜ್ಯ ಸರಕಾರಿ ಪ್ರಥಮ‌ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಡಾ. ಟಿ. ದುರುಗಪ್ಪ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ  ಸಹ ಪ್ರಾಧ್ಯಾಪಕ ಡಾ. ಶಶಿಕಾಂತ ಬಿಲ್ಲವ,  ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಕಾಂತ ಕೆ ಎಂ, ಗ್ರಂಥಪಾಲಕ ಕಿರಣ್ ಸುಹಾಸ್,
ಉಪನ್ಯಾಸಕರುಗಳಾದ ಡಾ. ರಾಮಯ್ಯ, ಡಾ. ಕೆ. ಬಸಪ್ಪ, ಡಿ.‌ಸಿದ್ದೇಶ್, ಟಿ.ರುದ್ರಮುನಿ, ರಾಮಣ್ಣ, ಮುತ್ತಪ್ಪ, ಡಾ.‌ಹನುಮೇಶ್ ಜೋಳದರಾಶಿ,
ಎಂ.‌ರಫಿ, ಮಾರೆಪ್ಪ ಎಕೆ, ಗುರುರಾಜ್, ಶರಣಪ್ಪ,  ಡಾ.‌ಬಸವರಾಜ ಟಿ, ಡಾ.‌ಬೆಣಕಲ್ಲು ಗಂಗಾಧರ, ಮುದುಕಪ್ಪ ಕೆ, ಹೊನ್ನೂರು ಸಾಬ್, ಮೊಹಮ್ಮದ್ ಗೌಸ್, ರಾಮಣ್ಣ,  ಡಾ.ಜ್ಯೋತಿಲಿಂಗ ಸೇರಿದಂತೆ ಕಾಲೇಜಿನ
ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.


ಸನ್ಮಾನ: ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷ ನಾಗಪ್ಪ ಅವರನ್ನು ವಿವಿಧ ಸಂಘ ಸಂಸ್ಥೆಗಳು‌ ಹಾಗೂ ಗಣ್ಯ ಅತಿಥಿಗಳನ್ನು ದಸಾಪ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಇತಿಹಾಸ ಉಪನ್ಯಾಸಕ ರಾಮು ಎ ಕೆ ಸ್ವಾಗತಿಸಿದರು.  ದಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಸಾಪ ನೂತನ ಜಿಲ್ಲಾಧ್ಯಕ್ಷ ನಾಗಪ್ಪ ಬಿ ಇ ವಂದಿಸಿದರು. ವಿದ್ಯಾರ್ಥಿನಿ ಶಾಂತಿ ಪ್ರಾರ್ಥಿಸಿದರು.
ಕನ್ನಡ ವಿಭಾಗದ ಉಪನ್ಯಾಸಕ ಆರ್. ರುದ್ರಮುನಿ ನಿರೂಪಿಸಿದರು.