ಬಳ್ಳಾರಿ, ಆ.26: ಮುಷ್ಕರ ನಿರತ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು, ಸದಸ್ಯರ ಮೇಲೆ ಕೆಲವು ಸ್ಪಾಂಜ್ ಐರನ್ ಕಾರ್ಖಾನೆಯ ಆಡಳಿತ ಮಂಡಳಿಯವರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಿಂಚು ಶ್ರೀನಿವಾಸ್ ಆರೋಪಿಸಿದರು. ಸೋಮವಾರ ಸಂಜೆ ತಮ್ಮನ್ನು ಭೇಟಿಮಾಡಿದ ಸುದ್ದಿಗಾರರ ಜತೆ ಅವರು ಮಾತನಾಡಿದರು. ಲಾರಿ ಸರಕು ಸಾಗಾಟದ ದರ ಹೆಚ್ಚಿಸಬೇಕು, ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡಬೇಕು, ಓವರ್ ಲೋಡ್ ಲಾರಿಗಳನ್ನು ನಿಷೇಧಿಸಬೇಕು, ಸೀರಿಯಲ್ ಪ್ರಕಾರ ಸ್ಥಳೀಯ ಲಾರಿಗಳಿಗೆ ಆದ್ಯತೆ ಸರಕು ಸಾಗಣೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಕಳೆದ ಆರು ದಿನಗಳಿಂದ ಬಳ್ಳಾರಿ ಸುತ್ತಮುತ್ತ ಇರುವ ಐದು ಸೆಕ್ಟರ್ ಗಳಲ್ಲಿ ಹಗಲು ರಾತ್ರಿ ನಾವು ಮುಷ್ಕರ ನಡೆಸಿದ್ದೇವೆ ಎಂದು ಅವರು ತಿಳಿಸಿದರು. ಕಳೆದ ಆರು ದಿನಗಳ ಅಹೋರಾತ್ರಿ ನಮ್ಮ ಶಾಂತಿಯುತ ಅನಿರ್ದಿಷ್ಟಾವಧಿ ಮುಷ್ಕರದ ಬಿಸಿ ತಾಕಿರುವುದರಿಂದ ಈಗ ಕಾರ್ಖಾನೆಗಳ ಆಡಳಿತ ಮಂಡಳಿಯ ಅಧಿಕಾರಿಗಳು ಕಾರ್ಖಾನೆಗಳ ಸಮೀಪದ ಊರುಗಳ ಜನರನ್ನು ಪ್ರಚೋದಿಸಿ, ನಮ್ಮ ಮೇಲೆ ಹಲ್ಲೆ ಮಾಡಿಸುವ ಪ್ರಯತ್ನಗಳು ಆರಂಭವಾಗಿವೆ ಎಂದಿರುವ ಅವರು, ಈಗಾಗಲೇ ಎರಡು ಕಡೆ ಕಾರ್ಖಾನೆಯವರು ಗ್ರಾಮಸ್ಥರನ್ನು ಹುರಿದುಂಬಿಸಿ ಕಳಿಸಿದ್ದರು. ನಾವು ಶಾಂತಿಯುತವಾಗಿ ಮಾತನಾಡುವ ಮೂಲಕ ಮನವೊಲಿಸಿ ಕಾರ್ಖಾನೆಯವರ ದುಷ್ಟ ಉದ್ದೇಶವನ್ನು ವಿಫಲಗೊಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಕಳೆದ ತಿಂಗಳು 5 ದಿನಗಳ ಕಾಲ ನಡೆದ ಮುಷ್ಕರವನ್ನು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರ ಮಧ್ಯಸ್ತಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಸ್ಪಾಂಜ್ ಐರನ್ ಮಾಲೀಕರ ಸಂಘ ನಮ್ಮ ಬಹುತೇಕ ಬೇಡಿಕೆಗಳನ್ನು ಒಪ್ಪಿತ್ತು. ಆದರೆ ತದನಂತರ ಸ್ಪಾಂಜ್ ಐರನ್ ಕಾರ್ಖಾನೆಗಳ ಸಂಘದ ಅಧ್ಯಕ್ಷರು ಮಾತು ಬದಲಿಸಿದ್ದರಿಂದ ನಾವು ಮತ್ತೆ ಮುಷ್ಕರಕ್ಕೆ ಇಳಿಯುವುದು ಅನಿವಾರ್ಯವಾಯಿತು ಎಂದರು. ನಮ್ಮ ಸಮಸ್ಯೆ ಇತ್ಯರ್ಥ ಆಗಲು ಮತ್ತೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಲಾರಿ ಮಾಲೀಕರ ಮುಷ್ಕರ 6ನೇ ದಿನಕ್ಕೆ: ಡಿಸಿ, ಎಸ್ಪಿ ಅವರು ಮಧ್ಯಸ್ಥಿಕೆ ವಹಿಸುವಂತೆ ಅಧ್ಯಕ್ಷ ಮಿಂಚು ಶ್ರೀನಿವಾಸ್ ಒತ್ತಾಯ
One thought on “ಲಾರಿ ಮಾಲೀಕರ ಮುಷ್ಕರ 6ನೇ ದಿನಕ್ಕೆ: ಡಿಸಿ, ಎಸ್ಪಿ ಅವರು ಮಧ್ಯಸ್ಥಿಕೆ ವಹಿಸುವಂತೆ ಅಧ್ಯಕ್ಷ ಮಿಂಚು ಶ್ರೀನಿವಾಸ್ ಒತ್ತಾಯ”
Comments are closed.
Good work seenu anna