ಅನುದಿನ ಕವನ-೧೩೪೨, ಕವಯಿತ್ರಿ: ಡಾ. ಕೃಷ್ಣವೇಣಿ. ಆರ್. ಗೌಡ, ಹೊಸಪೇಟೆ, ವಿಜಯ ನಗರ ಜಿಲ್ಲೆ, ಕವನದ ಶೀರ್ಷಿಕೆ: ಪ್ರಕೃತಿಯ ಆಟ

ಪ್ರಕೃತಿಯ ಆಟ

ಓಡಾಡಿ ಓಡಾಡಿ
ಅಂದಿಗೆ ಸೋತು ನಿಂತಾಗ
ಅಚ್ಚರಿಯ ಮಳೆ ಸುರಿಯುತ್ತ
ಮನದ ಖುಷಿ ತಾಳಲಾಗದೆ
ತುಟಿಯ ಕಿರುನಗೆ….

ಒಡಲ ಬೇಗೆ ತಂಪಿಗೆ
ಮೋಡದ ಕಿರು ಸ್ಪರ್ಶ ಛಾಯೆ
ಕಾಮನಬಿಲ್ಲ ಚಿತ್ರದಿ
ನೀಲಿ ಕಿರಣ ಹುಸಿ ನಗೆ
ಸೂಚಿಸಿದೆ….

ಹೇಗೆ ವರ್ಣಿಸಲಿ ಮೌನ ಮನದ
ಅಗ್ನಿ ತಲ್ಲಣ..
ಇದಕೆ ಲಜ್ಜೆ ಎಚ್ಚರಿಕೆ ಸೂಚಿಸಿ
ನಾಚುತ್ತಿದೆ…

ಹಸಿರ ಎಲೆ ಒಂದಂನ್ನೊಂದು
ತಾಕುತ ಆಲಿಂಗನಗೊಳ್ಳುತ್ತಿವೆ
ನಲ್ಲನ ನೆನಪು ಬರೀ ನೆಪವಾಯಿತೇ?..

ಪ್ರಾಕೃತ್ಯದ ವಾರೆ ನೋಟ
ಬಡ ಸಂಕುಲದ ಮಿಂಚು
ರವೆ ಗಂಜಿಯ ಸವಿಯುತ
ಚಳಿಯ ಸಂತೈಸುತಿದೆ….

ಆದರೂ ಬೆಂಬಿಡದೆ
ರಾಜಕೀಯ ರಂಗಿನ ಇಳೆ
ತಾಕುತ್ತಿದೆಯಲ್ಲ ಭುವಿಯ ಒಡಲಿಗೆ….

ಏಕೋ ಗೊತ್ತಿಲ್ಲ?.. ಮರ್ಕಟದ
ಮರ್ಮ ಇಂದ್ರಿಯಗಳ ಸುಡುತಿದೆ.
ಇದು ವಯಸ್ಸಿನ ಅಯೋಮಯವೋ ಅಥವಾ
ಮುನ್ಸೂಚನೆಯ ಪ್ರಲಾಪವೋ
ಅರಿಯೆ?…

ಪ್ರಕೃತಿಯ ಆಟಕೆ
ಹೇಳ ಹೆಸರಿಲ್ಲದೆ ವೇಗ ಚಲಿಸುತಿದೆ….

-ಡಾ. ಕೃಷ್ಣವೇಣಿ. ಆರ್. ಗೌಡ, ಹೊಸಪೇಟೆ, ವಿಜಯ ನಗರ ಜಿಲ್ಲೆ