ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನ ಸಿರಿ ಪ್ರಶಸ್ತಿ ಪ್ರದಾನ: ಭಯದಿಂದ ಭಕ್ತಿ, ಜ್ಞಾನ,ವೈರಾಗ್ಯ -ಶತಾಯುಷಿ ಹೊನ್ನೂರುಸಾಬ್

ಭರಮಸಾಗರ, ಸೆ.8: ಭಯದಿಂದ ಭಕ್ತಿ, ಜ್ಞಾನ,ವೈರಾಗ್ಯ ಎಂದು ಶತಾಯುಷಿ ಹೊನ್ನೂರುಸಾಬ್ ಅವರು‌ ಹೇಳಿದರು.                                                  ಸಮೀಪದ ನವಗ್ರಾಮ ನೆಲ್ಲಿಕಟ್ಟೆಯಲ್ಲಿ ಏರ್ಪಡಿಸಿದ್ದ ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನಸಿರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತಾಡಿದರು.                                            ಭಯದಿಂದ ಭಕ್ತಿ ಉದಯಿಸುತ್ತದೆ. ಭಕ್ತಿಯಿಂದ ಜ್ಞಾನ ಸಿದ್ದಿಯಾಗುತ್ತದೆ. ಜ್ಞಾನದಿಂದ ವೈರಾಗ್ಯ ಉಂಟಾಗಿ ಈ ಬದುಕನ್ನು ಸಾರ್ಥಕಗೊಳಿಸುತ್ತದೆಂದು ತಿಳಿಸಿದರು.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಹೆತ್ತಹೊತ್ತವರ ಸಾಕುವುದರೊಳಗೆ ಜೀವನ ತೃಪ್ತಿಯಿದೆ. ಅಂತಹ ಸಂತೃಪ್ತ ಜೀವನ ಮಾರಕ್ಕಮಾತೆಯ ಮಕ್ಕಳದು. ಆ ಮಹಾತಾಯಿಯ ಹೆಸರನ್ನು ಚಿರಾಯುವಾಗಿಸಲಾಗಿದೆ ಎಂದರು.                                                       ನೆಲ್ಲಿಕಟ್ಟೆ ಮಾರಕ್ಕಮಾತೆ ಸಂಗೀತಸಿರಿ ಪ್ರಶಸ್ತಿಯನ್ನು ಅನನ್ಯ ಕಲಾವಿದ ಬಸವರಾಜ್ ಹುಲ್ಲೆಹಾಳು ಅವರಿಗೆ ಪ್ರದಾನ ಮಾಡಿದ ಯುಗಧರ್ಮರಾಮಣ್ಣ ಅವರು ಈ ಲೋಕದ ಸಂಕಟಗಳಿಂದ ಪಾರಾಗಲು ಜನಸೇವೆಯು ಸರಿದಾರಿ ತೋರಿಸುವುದು ಎಂದರು.                ಬೆಳಗಟ್ಟದ ಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಅಮ್ಮಮಹದೇವಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು.                       ದಿವ್ಯಸಾನಿದ್ಯ ವಹಿಸಿದ್ದ ಶ್ರೀ ಬಸವನಾಗೀದೇವಶರಣರು ಆಶೀರ್ವಚನ ನೀಡಿದರು.                                ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.           ಮುಖ್ಯ ಅತಿಥಿ ಪ್ರಹ್ಲಾದ್ ಜೆ.ನಾಡಿಗ್ ಭಾಗವಹಿಸಿದ್ದರು.  ನವೀನ್ ನಿರೂಪಿಸಿದರು. ಸಿ.ಎಂ.ನೇತ್ರಾವತಿ ವಂದಿಸಿದರು.