ವೀ ವಿ ಸಂಘದಲ್ಲಿ ಶಿಕ್ಷಕರ ದಿನಾಚರಣೆ: ಶಿಕ್ಷಕರು ಸಮಾಜದ ಶಿಲ್ಪಿಗಳು -ಪ್ರಕಾಶ್ ಕುಲಕರ್ಣಿ

ಬಳ್ಳಾರಿ, ಸೆ.29: ಶಿಕ್ಷಕರು ಸಮಾಜದ ಶಿಲ್ಪಿಗಳು ಎಂದು‌
ಪ್ರಕಾಶ್ ಟ್ಯೂಟೋರಿಯಲ್ ಮುಖ್ಯಸ್ಥ ಪ್ರಕಾಶ್ ಕುಲಕರ್ಣಿ ಅವರು ಹೇಳಿದರು.
ವೀರಶೈವ ವಿದ್ಯಾವರ್ಧಕ ಸಂಘ ಅಲ್ಲಂ ಸುಮಂಗಳಮ್ಮ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಬೆನ್ನಲುಬು. ಆಗಿರುವ ಶಿಕ್ಷಕರು ಹೊಸ ತಂತ್ರಜ್ಞಾನ ತಿಳಿದು ಮಕ್ಕಳಲ್ಲಿ ಆತ್ಮ ಶಕ್ತಿ ತುಂಬಬೇಕು ಎಂದು ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳತ್ತ ಪ್ರರೇಪಿಸಬೇಕು ಎಣಮದರು.
ವೀ ವಿ ಸಂಘ ಶಿಕ್ಷಕರ ಸೇವೆಯನ್ನು ಪರಿಗಣಿಸಿ ಸನ್ಮಾನಿಸುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಸಾಧಕರ‌ ಯಶಸ್ಸಿನ ಹಿಂದೆ ಶಿಕ್ಷಕರ ಶ್ರಮವಿರುತ್ತದೆ. ಬಡತನದಲ್ಲಿ ಓದಿ ಬಂಗಾರದ ಪದಕ ಪೆಡದು ಪಾಸಾದ ನಾನು ವೀ ವಿ ಸಂಘದ ವಿದ್ಯಾರ್ಥಿ ಎನ್ನುವುದು ನನಗೆ ಹೆಮ್ಮೆ ಎಂದರು.
ಕಳೆದ ೪೦ ವರ್ಷಗಳಿಂದ ಪ್ರಕಾಶ್ ಟ್ಯೂಟೋರಿಯಲ್ ನಡೆಸುತ್ತಾ ಬಂದಿದ್ದೇನೆ, ಎಸ್ ಎಲ್ ಬೈರಪ್ಪ ನನಗೆ ಗುರುವಾಗಿದ್ದರು.ಡಾ ಎಸ್ ಡಿ ಶರ್ಮಾ ಓಮನ್ ದೇಶಕ್ಕೆ ಬಂದಾಗ ಅಲ್ಲಿಯ ಸುಲ್ತಾನ್ ಅತ್ಯಂತ ಗೌರವದಿಂದ ಬರಮಾಡಿಕೊಂಡ ಕಾರಣ ಆತ ಡಾ.ಎಸ್ ಡಿ ಶರ್ಮಾ ಅವರ ವಿದ್ಯಾರ್ಥಿಯಾಗಿದ್ದ ಎಂದು ಗುರು ಶಿಷ್ಯರ ಸಂಬಂಧವನ್ನು ನೆನಪಿಸಿಕೊಂಡರು.
ಸ್ವಾಗತಿಸಿ ಪ್ರಸ್ತಾವಿಕ ನುಡಿಯನ್ನು ಹಂಚಿಕೊಂಡ ವೀ .ವಿ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಟೀಲ್, ಶಿಕ್ಷಕರಿಂದ ಶಿಕ್ಷಣ ಕ್ಷೇತ್ರ ಗೌರವಿತವಾಗಬೇಕು , ಕಲ್ಯಾಣ ಕರ್ನಾಟಕದಲ್ಲಿ ಪ್ರತಿಷ್ಠಿತ ಸಂಸ್ಥೆಯಾದ ವೀ ವಿ ಸಂಘ ವು ಹಾನಗಲ್ ಕುಮಾರ ಮಹಾಸ್ವಾಮಿಗಳ ಮುಂದಾಲೋಚನೆಯಿಂದ ಸ್ಥಾಪಿಸಲ್ಪಟ್ಟಿತು. ಕಳೆದ ೧೦೦ ವರ್ಷಗಳಿಂದ ಈ ಸಂಸ್ಥೆ ಗುಣ ಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ .ಬದಲಾದ ವ್ಯವಸ್ಥೆಯಲ್ಲಿ ಮಕ್ಜಳಿಗೆ ಕಲಿಸುವುದು ಶಿಕ್ಷಕರಿಗೆ ಸವಾಲಾಗಿದೆ. ಈ ಸವಾಲನ್ನು ಸ್ವಿಕರಿಸಿ ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ವೀ ವಿ ಸಂಘದ ಕೋಶಾಧಿಕಾರಿ ಬೈಲುವದ್ದಿಗೇರಿ ಎರ್ರಿಸ್ವಾಮಿ ಅವರು ಮಾತನಾಡುತ್ತಾ ಶಿಕ್ಷಕರ ಸೇವೆಯನ್ನು ಹಾಗೂ ಸಂಘದ ಶೈಕ್ಣಣಿಕ ಸೇವೆಯನ್ನು ಸ್ಮರಿಸಿದರು .
ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಗೂ ಮಾಜಿ ಕಾರ್ಯದರ್ಶಿ ಟಿ ಚೋರುನೂರು ಕೊಟ್ರಪ್ಪ ಅವರು ಮಾತನಾಡುತ್ತಾ ಶಿಕ್ಷಕರು ಸಾಯುವವರೆಗೆ ಶಿಕ್ಷಕನಾಗಬೇಕು ಶಿಕ್ಷಕ ಸೋತರೆ ದೇಶ ಸೋತಂತೆ ಎಂದು ಶಿಕ್ಷಣದ ಮಹತ್ತವನ್ನು ವಿವರಿಸಿದರು.
ಕಾರ್ಯಕ್ರಮದ ಆದ್ಯಕ್ಷತೆ ವಹಿಸಿದ್ದ ಅಲ್ಲಂ ಗುರುಬಸವರಾಜ ಅದ್ಯಕ್ಷರು ವೀ ವಿ ಸಂಘ ಇವರು ಮಾತನಾಡುತ್ತಾ ಎರಡನೇ ಬಾರಿ ನಾನು ಅದ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತದ್ದು ನನ್ನ ಭಾಗ್ಯ . ನಮ್ಮ ವೀ ವಿ ಸಂಘ ಕಲ್ಯಾಣ ಕರ್ನಾಟಕದಲ್ಲಿ ಪ್ರತಿಷ್ಠಿತ ಸಂಘವಾಗಿದೆ. ಪ್ರತಿಯೊಬ್ಬ ನೌಕರರು ಶ್ರಮವಹಿಸಿ ದುಡಿದು ಸಂಘಕ್ಕೆ ಕೀರ್ತಿ ತರಬೇಕೆಂದು ಮನವಿ ಮಾಡಿದರು..ಸಂಘದ ದೀಪ ಇನ್ನು ಬೆಳಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವೀ ವಿ ಸಂಘದಲ್ಲಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ ೨೮ ಶಿಕ್ಷಕರಿಗೆ ಗಣ್ಯರು ಸನ್ಮಾನಿಸಿದರು ,ಸನ್ಮಾನಿತರ ಪರವಾಗಿ ಎ.ಎಸ್ ಎಂ ಕಾಲೇಜಿನ‌ ಡಾ ಜಲಜಾಕ್ಷಿ, ಎ.ಡಿ ಬಿ ಕಾಲೇಜಿನ ಡಾ.ಜಿ ಬಿ ನಾಗನಗೌಡ, ಎಸ್ ಜಿ ಕಾಲೇಜಿನ ಲಿಂಗರಾಜ ಅವರು ಮಾತನಾಡಿದರು.
ಕಾರ್ಯಕಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಹಚ್ಚೊಳ್ಳಿ ಎಂ ಶರಣಬಸವನಗೌಡ, ಕೋರಿ ವಿರುಪಾಕ್ಷಪ್ಪ ,ಶ್ರೀಮತಿ ಕಾತ್ಯಾಯನಿ ಮರಿದೇವಯ್ಯ, ಟಿ ನರೇಂದ್ರಬಾಬು ಉಪಸ್ಥಿತರಿದ್ದರು.
ಗಂಧರ್ವ ಶಾಲೆಯ ಮಕ್ಕಳು ವಚನಗಾಯನ ಹಾಗೂ ಪ್ರಾರ್ಥನೆ ನೆರವೇರಿಸಿದರು ಎ.ಎಸ್ ಎಂ ಕಾಲೇಜಿನ ಪ್ರಾಚಾರ್ಯ ಡಾ.ಗೋವಿಂದ ರಾಜು ಅವರು ವಂದಿಸಿದರು. ಉಪನ್ಯಾಸಕ ಡಾ.ಗಂಗಾಧರ ನಿರೂಪಿಸಿದರು.
ವೀ ವಿ ಸಂಘದ ವಿವಿಧ ಶಾಲಾ ಕಾಲೇಜಿನ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
—–