ಮಾತಾಡಿಕೊಂಡ
ಭಾವಗಳು ಧೂಳು
ಹಿಡಿದಿದ್ದು ಎದೆಗೆ
ಬಾಗಿಲು ಹಾಕಿದ ಮೇಲೆ
ಅರಿತ ಎದೆಯಲ್ಲೂ
ನನ್ನವರ ಹುಡುಕಿಕೊಡುವ
ಸಮಯವೂ ವಿನಾ
ಪರೀಕ್ಷಿಸುತ್ತದೆ
ಒಂಟಿಯಾಗಿಸಿ
ಎಲ್ಲರೊಡನೆ
ನಗುವ ಬದುಕು
ಸವಾಲೇ ಸರಿ
ಕಡೆ ಪಕ್ಷ
ಉತ್ತೀರ್ಣನಾಗುವ
ಪರಿಗೆ ಬರೆದ ಕವಿತೆ
ಭಿನ್ನಾಭಿಪ್ರಾಯಗಳ ವೈರುದ್ಯಕ್ಕೆ
ಪದಗಳು ಅಸ್ಪಷ್ಟ
ಕನಿಷ್ಠ ಕಾಳಜಿಯ
ಮೌಲ್ಯಮಾಪನಕ್ಕೂ
ಒಳಪಡದೆ
ಎಸೆದ ಕವಿತೆ
ಪ್ರಾಣ ಉಳಿಸಿಕೊಳ್ಳುವಲ್ಲಿ
ಮತ್ತಷ್ಟು ವಿಲವಿಲ
-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
——