ಬಳ್ಳಾರಿ, ನ.14: ನಗರದ ಅಲ್ಪಸಂಖ್ಯಾತರ ಕಾಲೋನಿಗಳ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ವಿವಿಧ ವಾರ್ಡ್’ಗಳಲ್ಲಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಅಂದಾಜು ಒಟ್ಟು 5 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಗುರುವಾರ ನಗರದ ವಿವಿಧ ವಾರ್ಡ್’ಗಳಲ್ಲಿ ಚಾಲನೆ ನೀಡಲಾಯಿತು. ಮೊದಲಿಗೆ ವಾರ್ಡ್ ನಂ.04ರ ಗುಗ್ಗರಹಟ್ಟಿಯಲ್ಲಿ 95.70 ಲಕ್ಷ ರೂ.ಗಳ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ನಂತರ ವಾರ್ಡ್ ನಂ.6ರ ಗರೀಬ್ ನವಾಜ್ ಕಾಲೋನಿಯಲ್ಲಿ ಅಂದಾಜು ವೆಚ್ಚ 82.32 ಲಕ್ಷ ರೂ.ಗಳ ಕಾಮಗಾರಿಗೆ ಚಾಲನೆ ನೀಡಲಾಯಿತು. ಅದೇ ರೀತಿ 14ನೇ ವಾರ್ಡ್ ನ ಮಿಲ್ಲರ್ ಪೇಟೆಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ (ಅಂದಾಜು 52.45 ಲಕ್ಷ ರೂ.ಗಳು) ಚಾಲನೆ ನೀಡಲಾಯಿತು. ವಾರ್ಡ್ ನಂ.9 ವೆಂಕಟರಮಣ ಕಾಲೋನಿಯಲ್ಲಿ ಅಂದಾಜು ವೆಚ್ಚ 35.58 ಲಕ್ಷ ರೂ.ಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ವಾರ್ಡ್ ನಂ.17ರ ಅಂಜಿನಪ್ಪ ನಗರದಲ್ಲಿ ಅಂದಾಜು ವೆಚ್ಚ 182.83 ಲಕ್ಷ ರೂ.ಗಳ ಸಿಸಿ ರಸ್ತೆ, ಒಳ ಹಾಗೂ ಹೊರ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ವಾರ್ಡ್ ನಂ.15 ಇಲಾಹಿ ಬೀದಿಯಲ್ಲಿ ಅಂದಾಜು ವೆಚ್ಚ 14.72 ಲಕ್ಷ ರೂ.ಗಳ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಡಿ.ಸೂರಿ, ಬಿಆರೆಲ್ ಸೀನಾ, ಎಂ.ವಿವೇಕ್, ಹೊನ್ನಪ್ಪ, ಹಗರಿ ಗೋವಿಂದ, ಎಪಿಎಂಸಿ ಅಧ್ಯಕ್ಷ ಕಟ್ಟೇಮನೆ ನಾಗೇಂದ್ರ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಜಬ್ಬಾರ್, ಕವಿತಾ ಹೊನ್ನಪ್ಪ, ಬಾಲರಾಜು, ಹೊಂಡ್ರಿ, ರಘುರಾಂ ಮೊದಲಾದವರು ಹಾಜರಿದ್ದರು. ಅಹವಾಲು ಸ್ವೀಕಾರ: ಇ ದೇ ಸಂದರ್ಭದಲ್ಲಿ ಸಾರ್ವಜನಿಕರು ಶಾಸಕ ನಾರಾ ಭರತ್ ರೆಡ್ಡಿಯವರಿಗೆ ಅಹವಾಲು ಸಲ್ಲಿಸಿದರು.