ಪ್ರೀತಿ
ಮಾಸದ ಕೊನೆಯಲ್ಲರಸಿಗೆ
ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ
ಸಂಬಳ ಗಿಟ್ಟಿಸಿದವಳೆ
ಹುಟ್ಟಿಸುವಳು ಭಯ ಭೀತಿ.
ಕೋಪ
ನನ್ನರಸಿಯ ಕೋಪ ದಲಿ
ನಿತ್ಯ ಏಳುವೆನು ಮಿಂದು
ನಯವಾಗಿ ಕರೆಯಲು
ಬಿಗಿದಪ್ಪುವಳು ಬಂದು
ಹಾಸ್ಯ
ಮಡದಿಯ ಮಾತಿನಲಿ
ತೇಲುತಿರಲು ತಿಳಿ ಹಾಸ್ಯ
ವರ್ಷಗಳೂ ಆಗುವವು
ಕ್ಷಣ ನಿಮಿಷ
ವಿರಹ
ತಾಳಲಾರೆ ಅರಗಿಣಿಯ ವಿರಹ
ಬದುಕಲಿ ಬರೆಯುವಳು ಸವಿ ಬರಹ
ನೀಗಿಸುವಳು ಮನವರಿತು ದಾಹ
ಪದಗಳಿಲ್ಲ ವರ್ಣಿಸಲವಳ ಮೋಹ.
-ಮಾಣಿಕ ನೇಳಗಿ ತಾಳಮಡಗಿ, ಬೀದರ್