ಅನುದಿನ ಕವನ-೧೪೨೭, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ತಾರಾ ಲೋಕದ ತಾರೆಯೆ

ತಾರಾ ಲೋಕದ ತಾರೆಯೆ

ಮರೆತಿರಲಾರೆ ನಿನ್ನನ್ನು;
ಅನುದಿನ ಬರುತಿಹ ಸವಿ ನೆನಪಿನ ತಂಗಾಳಿಯೆ!
ಹಾಡದಿರಲಾರೆ ಒಲವನ್ನು;
ಅನುಕ್ಷಣ ಎದೆಯ ಮೇಲೆ ಸುರಿವ ಹೂ ಮಳೆಯೆ!

ನೀ ಹೋದ ಘಳಿಗೆಯದು;
ಅರಿಯದೆ ಹೃದಯಕ್ಕೆರಗಿದ ಸಿಡಿಲ ಆಘಾತವೆ!
ನೀ ಮಾತುಬಿಟ್ಟ ದಿನವದು;
ಅಲೆಗಳ ಸುಳಿಗೆ ಸಿಲುಕಿ ಉಸಿರುಕಟ್ಟಿ ಒದ್ದಾಡಿದೆ!

ತಾರಾ ಲೋಕದ ತಾರೆಯೆ;
ನನ್ನೆದೆಯ ಬಾಂದಳದಿ ಮಿನುಗುತಿಹೆ ಮುಳುಗದೆ!
ದೂರವೆ ಉಳಿದರು ಒಲವೆ;
ನಿನ್ನದೇ ನೆನಪುಗಳ ಬೆಳಕಲ್ಲಿ ಬದುಕುವೆ ಕೊರಗದೆ!

ನಮ್ಮ ಪ್ರೀತಿ ಅಮರವೆ;
ಒಂದಾಗಿ ಸಾಗದಿದ್ದರು ಬದುಕಿಗೆ ತ್ಯಾಗ ಉಳಿದಿದೆ!
ನಮ್ಮ ಪ್ರೀತಿ ಚೈತನ್ಯವೆ;
ಚಂದನದ ಸುಗಂಧವು ಜಗದ ಬಂಧನದಿ ಅಳಿಯದೆ!

-ಟಿ.ಪಿ.ಉಮೇಶ್, ಹೊಳಲ್ಕೆರೆ
——