ದಂತದ ಗೊಂಬೆ
ನನ್ನೆಲ್ಲಾ ಸುಂದರ ಕಲ್ಪನೆಗಳಿಗೆಲ್ಲಾ
ಒಮ್ಮೆ ಜೀವ ನೀಡಿದವಳು
ದಂತದ ಗೊಂಬೆಯಂತವಳು ಪಳ
ಪಳನೆ ಹೊಳೆದು ನನ್ನ ಸೆಳೆದವಳು//.
ಕಣ್ಣಾ ಎದುರಲ್ಲಿ ಮಿನುಗುವ
ಅಪ್ಸರೆಯಂತೆ ನಿಂದವಳು
ನನ್ನ ಮನವ ಚಂಚಲಗೊಳಿಸಲು
ಬಂದಾ ಮೋಹಿನಿ ಇವಳು//.
ಅಪ್ರತಿಮ ಚೆಲುವೆ ಸ್ವರ್ಗದಿಂದ
ಧರೆಗಿಳಿದ ಶಿಲಾಬಾಲಿಕೆಯೀವಳು
ಹಾಲ್ಗಡಲಲ್ಲಿ ಮಿಂದೆದ ಗಂಧರ್ವ
ಲೋಕದ ದೇವತೆಯಿವಳು//
ನನ್ನ ಹೃದಯದ ಪುಟ್ಟ ಗೂಡಲ್ಲಿ
ಮನದರಸಿಯಾಗಿ ನೆಲೆಸಿದಳು
ನನ್ನ ಕಲ್ಪನೆಯ ಲೋಕದಲ್ಲಿ ಕಾವ್ಯ
ಕುಸುರಿಯಾಗಿ ಬಂದವಳು//
ಕಣ್ಣಲ್ಲಿ ಕಣ್ಣಿಟ್ಟು ಕೂಗಿ ಕರೆಯುವ
ಮೊದಲೆ ಕರೆಯೋಲೆ ಕೊಟ್ಟವಳು
ಮನದಲ್ಲಿ ಅನುರಾಗವ ಅರಳಿಸಿ
ಮೆಲ್ಲನೆ ಮಾಯವಾದವಳು//
ಹೃದಯವಿದು ಮಿಡಿಯುತಿದೆ
ನಿನ್ನಾ ಮಧುರವಾದ ಪ್ರೀತಿಗೆ
ಅದ್ಯಾವ ಮಾಯಾಗರನ ಸೃಷ್ಟಿಯೊ
ಕಾಣೆ ನೀ ಬಂದೆ ನನ್ನೀ ಹೃದಯದೊಳಗೆ//
ನನ್ನಲಿ ಅರಳಿದ ಪ್ರತಿಯೊಂದು
ಆಸೆಗಳೆಲ್ಲಾ ಒಂದೊಂದಾಗಿ
ನಿನ್ನ ಸೇರಲೆಂದು ಕಾಯುತಿರುವಾಗ
ಬಂದೆ ನನ್ನ ಪ್ರೇಮ ದೇವತೆಯಾಗಿ//
-ಭಾವಸುಧೆ (ರಾಧಾ ಶಂಕರ್ ವಾಲ್ಮೀಕಿ), ತಿಪಟೂರು