ಕನಸುಗಳು ಕರೆದೊಯ್ದವು ಎಲ್ಲೆಲ್ಲಿಗೋ
ಖರ್ಚಿಲ್ಲದ ಮನೋಪಯಣ
ಮನೋರಂಜನೆ
ಯಾವುದೋ ಊರುಗಳು
ಗೊತ್ತಿಲ್ಲದ ಜನಗಳು
ಗೊತ್ತಿರುವಂತೆ ನಗು ಮಾತುಗಳು
ಯಾವುದೋ ಮನೆ
ಯಾವುದೋ ಅಮ್ಮ
ಕಣ್ಣೀರು ಅಳು ಅಪ್ಪುಗೆ
ಎಂತಹದ್ದೋ ಹಿತ
ಕಳೆದುಕೊಂಡದ್ದು ಸಿಕ್ಕ ಹಿಗ್ಗು
ಬೆಟ್ಟ ಗುಡ್ಡಗಳ ಸಾಲು ಸಾಲು
ತುಂಬಿದ ಕೆರೆಗಳು
ನಾಗಾಲೋಟದ ಕುದುರೆಗಳು
ಯಾವುದೋ ಭಾಷೆ
ಆದರೂ ಅರ್ಥವಾಗುತ್ತಿದೆ
ಯಾರದೋ ಭೇಟಿ
ಹೊಸ ಸ್ಥಳ
ಏನೋ ಹಿಗ್ಗು
ಮತ್ತೆ ಮತ್ತೆ ಅದೇ ಜಾಗ
ಅದೇ ಕನಸು
ಅದೇ ಜನ
ಅದೇ ಮನೆ
ಯಾವ ಜನ್ಮದ್ದೋ!!!!
-ಮಹಿಮ, ಬಳ್ಳಾರಿ
—–