ಕನಸುಗಳು ಖಾಲಿಯೋ
ಮನಸ್ಸಿಗೆ ಖಾಯಿಲೆಯೋ,
ತುಸು ಗೊಂದಲವಿದೆ.
ರಾತ್ರಿಯೀಗ ಕತ್ತಲೆಯಷ್ಟೇ,
ಕಲ್ಪನೆಗೆ ಬರ ಬಂದಂತೆ,
ತುಸು ಗೊಂದಲವಿದೆ.
ನಿನ್ನೆಯ ಮರೆತಂತೆ
ನಾಳೆ ಮರೀಚಿಕೆಯಂತೆ
ತಕ್ಷಣಕೆ ಗೊಂದಲವಿದೆ.
ಬೆಳಕಿಂಡಿ ಕಣ್ರೆಪ್ಪೆ ತೆರೆಸಿ,
ನವ ತರಂಗಗಳ ಎದೆಗಿಳಿಸಿ
ಹೊಸದೊಂದು ಜೀವಕಳೆ ತುಂಬಿದೆ
-ಅಪೂರ್ವ ಹಿರೇಮಠ, ಬೆಂಗಳೂರು
—–