ಚೂರಾದ ಗೋಲಿಗಳ ಹೆಕ್ಕಿ
ಹರಿದ ಗಾಳಿಪಟವನ್ನು
ಅಟ್ಟದ ಮೇಲಿರಿಸಿ
ಬಣ್ಣದ ಬುಗುರಿಯ ಕನಸು ಕಾಣುತ್ತಾ ಬೆವರುತ್ತಿದ್ದ ಬೇಸಿಗೆಯ ರಜೆ ಬೇಗ ಮುಗಿಯದಿರಲಿ
ಹೊಗೆ ತುಂಬಿದ ಕಣ್ಣುಗಳ
ಉಜ್ಜಿ ಉಜ್ಜಿ ಕೆಂಪಾಗಿಸಿ ಕಾಯಿಸಿದ ಬೆಂಕಿ ಸದಾ ಉರಿಸುವ ಮನೆಯೊಳಗೆ ಕೂಡಿಡುವ ಹಗಲಿರುಳು
ಒಂದೇ ಸಮನೆ ಅಳುವ
ಮಳೆ ಬೇಗ ನಿಲ್ಲಲಿ
ಈ ಸಲದ ಡಿಸೆಂಬರ್ ಎಂದಿನಂತಿಲ್ಲ,
ಬೆಳಗ್ಗೆ ಬಿಸಿಲು
ಅಪರೂಪದ ಮಳೆ …..
ಮೈ ಕೊರೆಯುವ ಚಳಿಗಾಗಿ ಕಾದು ಖಾಲಿಯಾಗದೇ ಮುನಿಸಿಕೊಂಡ ಬ್ರಾಂದಿ ಬಾಟ್ಲಿಯನ್ನು ಅಪ್ಪ ಸಮಾಧಾನಿಸಬೇಕಿದೆ.
-ವೈ ಜಿ ಅಶೋಕ ಕುಮಾರ್, ಬೆಂಗಳೂರು
—–