ಛಲವಾದಿ, ಚಲುವಾದಿ, ಚಾಲುಕಿ, ಚಾಲುಕ್ಯ ಪದಗಳ ಉಗಮ
ಕರುನಾಡ ದೊರೆಗಳಾಗಿದ್ದವರ ಹೆಸರಿನ ಬಗ್ಗೆ ಒಂದು ವಿವರಣೆ
ಪ್ರತಿ ವರುಷ ಕೆಲವು ದೇವಸ್ಥಾನಗಳಲ್ಲಿ (ಉದಾಹರಣೆಗೆ; ಮೇಲುಕೋಟೆ ಚೆಲುವನಾರಾಯಣ ದೇವಸ್ಥಾನ ಹಾಗು ಬೇಲೂರು ಚೆನ್ನಕೇಶವ ದೇವಸ್ಥಾನ) ಹೊಲಯನಿಗೆ ನೀಡುವ ಗೌರವವು ಕೆಲವೇ ದಿನಗಳಿಗೆ ಮತ್ತು ಆಚರಣೆಗೆ ಸ್ಥೀಮಿತವಾಗಿದ್ದರೂ ಅಲ್ಲಿ ಹೊಲಯನಿಗೆ ದೊರಕುವ ಗೌರವವು ರಾಜನಿಗೆ ದೊರಕುವ ಗೌರವದಂತಿದೆ. ಹೊಲಯ ದೊರೆಯಿಂದಲೇ ಆ ದೇವಸ್ಥಾನ ನಿರ್ಮಾಣವಾಗಿರದಿದ್ದರೆ ಹಾಗೂ ಹೊಲಯನಿಂದಲೇ ಆ ಧಾರ್ಮಿಕ ಆಚರಣೆಗಳು ಆರಂಭವಾಗದಿದ್ದರೆ ಈ ಬಗೆಯ ಆಚರಣೆಯನ್ನು ಮಧ್ಯಂತರದಲ್ಲಿ ಯಾವುದೋ ವ್ಯಕ್ತಿ ಆರಂಭಿಸಿದ ಎಂಬುದನ್ನು ಸಾಕ್ಷೀಕರಿಸುವುದು ಕಷ್ಟ. ಒಂದು ಕಾಲದಲ್ಲಿ ಮೇಲ್ವರ್ಗದ ರಾಜನಾಗಿದ್ದ ಹೊಲಯನ ಸಂಸ್ಕøತಿ, ಭಾಷೆ, ಧರ್ಮ ಹಾಗೂ ಸಂಪ್ರದಾಯಗಳನ್ನು ಒಪ್ಪಿ-ಅಪ್ಪಿಕೊಂಡ ಜನರು ಆತನ ಸ್ಥಿತಿ-ಗತಿಗಳು ಹೀನವಾಗಿ ಆತನು ಅಧಿಕಾರ-ಅಂತಸ್ತು ಕಳೆದುಕೊಂಡ ಮೇಲೆ ಅವನನ್ನು ಕೀಳಾಗಿ ಕಂಡರೂ ತಾವುಗಳು ಇಂದು ಪಡೆದಿರುವ ಸವಲತ್ತುಗಳು, ತಾವು ಮಾತಾಡುತ್ತಿರುವ ಭಾಷೆ, ತಾವು ಆಚರಿಸುತ್ತಿರುವ ಧರ್ಮ, ತಾವು ಪೂಜಿಸುತ್ತಿರುವ ದೇವರ ಮೂರ್ತಿ ಹಾಗೂ ತಾವು ನಡೆಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನೆಲ್ಲಾ ಹೊಲಯರಿಂದ ಪಡೆದಿರುವ ಜನರು, ಜನಾಂಗಗಳು ಹಾಗೂ ಒಂದು ಕಾಲದಲ್ಲಿ ಹೊಲಯನು ದೇವಸ್ಥಾನಕ್ಕೆ ಬರುವುದನ್ನೇ ಕಾಯುತ್ತಿದ್ದವರು, ಹೊಲಯರು ತಮ್ಮ ಬಡತನದಿಂದಾಗಿ ತಮ್ಮನ್ನು ಅಪ್ಪಿಕೊಂಡ ಹೀನಸ್ಥಿತಿಯಿಂದಾಗಿ ಕುಗ್ಗಿ ದೇವಸ್ಥಾನಕ್ಕೆ ಹೋಗುವದನ್ನು ತಪ್ಪಿಸತೊಡಗಿದರು. ಕೊನೆಗೆ ನಿಲ್ಲಿಸಿದರು. ಆದರೂ ಅವರ ಉಪಕಾರ ಸ್ಮರಣಾರ್ಥವಾಗಿ ಅವರನ್ನು ವರುಷಕೊಮ್ಮೆಯಾದರೂ ದೇವಸ್ಥಾನಕ್ಕೆ ಕರೆಯಿಸಿ ಗೌರವಿಸುವ ಸಂಪ್ರದಾಯ ನಾವಿಂದು ಮರೆತುಹೋದ ಆಡಳಿತ ವ್ಯವಸ್ಥೆಯ ಕಾಲದಲ್ಲಿ ಆರಂಭವಾಗಿ ಇಂದಿಗೂ ಚಾಚೂ ತಪ್ಪದೆ ನಡೆದುಕೊಂಡು ಬಂದಿದೆ.
ಕರ್ನಾಟಕ ರಾಜ್ಯದ ಬಾಲಕೋಟೆ ಪಟ್ಟಣದಲ್ಲಿ ಹೋಳಿ ಹಬ್ಬಕ್ಕೆ ಕಾಮನ ಸುಡಲು ಬೇಕಾಗುವ ಬೆಂಕಿಯನ್ನು ಅಲ್ಲಿಯ ದೇಸಾಯಿಯವರು(ರಾಜ ಕುಟುಂಬದವರು) ಮೆರವಣಿಗೆಯಲ್ಲಿ ಹೋಗಿ ಹೊಲೆಯರ ಮನೆಯಿಂದ ತರುವ ಸಂಪ್ರದಾಯವಿದೆ. ಆ ರೀತಿ ಬೆಂಕಿ ಕೊಡುವ ಹೊಲೆಯರ ಕುಟುಂಬದ ಕೆಲವರು ತಾವು ಹಿಂದೆ ಆ ನಾಡನ್ನು ಆಳುತ್ತಿದ್ದ ದೊರೆಗಳಾಗಿದ್ದೆವು. ನಾವು ಈಗ ಛಲವಾದಿಗಳು ಎನಿಸಿಕೊಳ್ಳುತ್ತೇವೆ. ಹಿಂದೆ ನಮ್ಮನ್ನು ಚಾಲುಕ್ಯರು ಎನ್ನುತ್ತಿದ್ದರು ಎನ್ನುತ್ತಾರೆ. ಬಾಗಲಕೋಟೆಯ ಛಲವಾದಿ(ಚಲವಾದಿ, ಚಲುವಾದಿ) ಎಂದು ಕರೆಯಿಸಿಕೊಳ್ಳುವ ಹೊಲೆಯರ(ಹೊಲಯರ, ಹೊಲಿಯರ) ಈ ಮಾತನ್ನು ನಾವು ಒಪ್ಪಬಹುದು ಹಾಗೂ ಹಲವಾರು ದಾಖಲಾತಿಗಳ ಮೂಲಕ ಸಾಕ್ಷೀಕರಿಸಬಹುದು.
ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಪ್ರಸಾರಾಂಗವು ಪ್ರಕಟಿಸಿರುವ ಬಾದಾಮಿ ಚಾಲುಕ್ಯರು ಎಂಬ ಲೇಖನ ಸಂಪುಟ ನೋಡಿರಿ. ಅದರಲ್ಲಿ ಅಧ್ಯಾಯ 5 ಪೊಲೆಕೇಶಿ(ಪುಲಕೇಶಿ, ಪುಲಿಕೇಶಿ) ಎಂಬ ಹೆಸರಿನ ಅರ್ಥವೇನು?- ಬರೆದವರು- ಎನ್.ಲಕ್ಷ್ಮೀನಾರಾಯಣರಾವ್. ಪುಟ -82; “ಈ ವಂಶದ ಅತಿ ಪ್ರಾಚೀನವಾದ ಶಾಸನಗಳಲ್ಲಿರುವ ಈ ಹೆಸರಿನ ರೂಪವಾದ “ಪೊಲೆಕೇಶಿ”ಯೆ ಮೂಲರೂಪವಿರಬೇಕೆಂದು ಡಾ||ಫ್ಲೀಟ್ ಹೇಳಿದ್ದಾರೆ. ಈ ರೂಪವನ್ನೇ ಶಾಸನ ಪರಿಶೋಧಕರಲ್ಲಿ ಅಗ್ರಗಣ್ಯರಾದ ಡಾ||ಖೀಲ್ ಹಾರ್ನ್ ಅವರೂ ಸಹ ಬಳಸಿದ್ದಾರೆ. ಮೊಟ್ಟ ಮೊದಲಿನ ಈ ಹೆಸರಿನ ರೂಪವಾದ “ಪೊಲಿಕೇಶಿ” ಎಂಬ ಪದವು ನನ್ನ ಅಭಿಪ್ರಾಯದಂತೆ ಪೊಲೆ ಮತ್ತು ಕೇಶಿ ಎಂಬ ಶುದ್ದ ಕನ್ನಡ ಶಬ್ದಗಳ ಸಂಯೋಗದಿಂದ ಉಂಟಾದ ಪದ. ಇದರ ಪೂರ್ವಾರ್ಧವಾದ “ಪೊಲೆ” ಎಂಬುದಕ್ಕೆ “ ಹೊಲೆಮೆನೆ” ಎಂದರ್ಥ. “ಕೇಶಿ” ಎಂಬುದು “ಕೇಶವ” ಎಂಬ ಹೆಸರಿನ ಸಂಕ್ಷಿಪ್ತರೂಪ. ಈ ರೂಪದಲ್ಲಿ ಈ ಪದವು ಕನ್ನಡ ಸಾಹಿತ್ಯದಲ್ಲಿಯೂ ಶಾಸನಗಳಲ್ಲಿಯೂ ಸಿಕ್ಕುತ್ತದೆ. “ಶಬ್ದಮಣಿದರ್ಪಣ”ವನ್ನು ರಚಿಸಿದ ಕೇಶಿರಾಜನು ತನ್ನ ಹೆಸರಿನ ಕೇಶಿ, ಕೇಶವ ಎಂಬ ಎರಡು ರೂಪಗಳನ್ನು ಈ ಗ್ರಂಥದಲ್ಲಿ ಕೊಟ್ಟಿದ್ದಾನೆಂಬುದು ಗಮನಾರ್ಹವಾಗಿದೆ.”
ಇದೇ ಸಂಪುಟದ ಅಧ್ಯಾಯ 6 ನೊಡಿರಿ. ಚಾಲುಕ್ಯ-ಪುಲಕೇಶಿ: ಪದನಿಷ್ಪತ್ತಿ- ಬರೆದವರು- ಹಂಪನಾಗರಾಜಯ್ಯ.
ಚಾಳುಕ್ಯರದು ಕೂಡ ಅಚ್ಚ ಕನ್ನಡ ಅರಸು ಕುಲ. ಚಾಳುಕ್ಯ ವಂಶದ ಉಗಮ ಹಾಗೂ ನಿಷ್ಪತ್ತಿಯನ್ನು ಕುರಿತು ಚರ್ಚೆಗಳಾಗಿವೆ. ಚರಿತ್ರಾಕಾರರು ನಡೆಸಿರುವ ಚಿಂತನ ಮಂಥನಗಳ ಸಾರಾಂಶಕ್ಕಿಂತ ಬೇರೆಯದಾದ ನಿಲುವು ನನ್ನದು. ಇದುವರೆಗೆ ಸೂಚಿತವಾಗಿರುವ ಶಬ್ದಾರ್ಥ ಜಿಜ್ಞಾಸೆಗೆ ಇನ್ನೊಂದು ಅರ್ಥವನ್ನು ಪೋಣೀಸುವುದಷ್ಟೇ ನನ್ನ ಉದ್ದೇಶವಲ್ಲ. ಭಾಷಿಕ, ಸಾಮಾಜಿಕ, ಭೌಗೋಳಿಕ ಮತ್ತು ಸಾಂಸ್ಕøತಿಕ ಹಿನ್ನೆಲೆಗಳಿಂದ ಈ ಚಾಳುಕ್ಯ ಶಬ್ದದ ನಿರ್ವಚನ ಮತ್ತು ಪುನರ್ ವ್ಯಾಖ್ಯೆಗೆ ಅವಕಾಶವಿದೆ. ‘ಚಾಳುಕ್ಯ’ ಎಂಬ ಶಬ್ದರೂಪಕ್ಕೆ ಸಂಬಂಧಿಸಿದ ಕೆಲವು ಪ್ರಾಚೀನ ಶಾಸನ ಪ್ರಯೋಗಗಳು
1. ಚಲ್ಕ್ಯ : ಬಾದಾಮಿ ಶಾಸನ : ಕ್ರಿ.ಶ. 578
2. ಚಳಿಕ್ಯ : ಮಹಾಕೂಟ ಸ್ತಂಭ ಶಾಸನ :ಕ್ರಿ.ಶ. 602
3. ಚಲಿಕ್ಯ : ಮಂಗಳೇಶನ ಶಾಸನ: ಕ್ರಿ.ಶ. 7ನೆಯ ಶತಮಾನ
4. ಚಲುಕ್ಯ : ಪುಲಿಕೇಶಿ II ಐಹೊಳೆಯ ಶಾಸನ: ಕ್ರಿ.ಶ.634
5. ಚಳುಕಿ : SIXVII. 27 ಅತೇದಿ.
6. ಸಳುಕಿ : SII, XI-i. 14. ಕ್ರಿ.ಶ. 872.
ಈ ಶಬ್ದದ ಚರ್ಚೆಯ ಕಕ್ಷೆಗೆ ಒಳಪಡುವ ಸಮಾನ ಮೂಲದ ಶಬ್ದಗಳ ಜಾತಕವನ್ನೂ ಬಿಡಿಸಿ ನೋಡಬಹುದು. ಚವುಳು, ನವುಳ Brackishness, ತಮಿಳು, ಚವುಡು, ತೆಲಗು, ಚವುಡು, ಚವಡು, ಚೌಡು.
ಚವುಳುಪ್ಪು Impure soda, soda-Saltpeter
ಚವುಳು ಮಣ್ಣು Fullers earth, earth impregnated with carbonate sida.
ಜಾಳ್ನೆಲ, ಜವುಳು ನೆಲ ಊಷ ಕ್ಷಾರಮೃತ್ತಿಕೆ.
ಚಳಿಯ the state of growing putrid of muddy
ತಮಿಳು, ಮಲೆಯಾಳಂ, ಚಳಿ to grow putrid, mud, mire ಕೆಸರು wet soil, mud, mire ತಮಿಳು, ಮಲೆಯಾಳಂ, ಚಳಿ, ಸುಳಿ, ಚದುಕು, ಜೀರುಕು
ಸಲಿಕೆ(ತ್ಭ) ಸಲಾಕೆ, ಸಂಸ್ಕøತ-ಶಲಾಕೆ, ಕಬ್ಬಿಣದ ಸರಳು, ಕೃಷಿ ಉಪಕರಣ ಮೇಲಿನ ಶಬ್ದ ರೂಪಗಳ ಹಿನ್ನೆಲೆಯಿಂದ ನೋಡುವಾಗ ಚಳಿಯ, ಚವುಳು, ಜವುಳು ಎಂಬ ಶಬ್ದಗಳು ಒಂದು ಮೂಲ ಪ್ರಕೃತಿ (ಆಕೃತಿ)ಯಿಂದ ನಿಷ್ಪನ್ನವಾದ ಶಬ್ದಗಳೆಂದು ಕಾಣುತ್ತದೆ. ಇವೆಲ್ಲವೂ ಮಣ್ಣಿಗೆ ಸಂಬಂಧಿಸಿದ ಮಾತುಗಳು. ಸಲಿಕೆ, ಸಲಾಕೆ ಎಂಬುದನ್ನೂ ‘ಚಳುಕ್ಯ-ಸಳುಕಿ’ ಎಂಬ ಶಬ್ದದ ಮೂಲಕ ಜ್ಞಾತಿ ಶಬ್ದಗಳೆಂದು (Cognate words) ಕಲ್ಪಿಸಬಹುದು. ಇದರಿಂದ ಪ್ರತೀತವಾಗುವಂತೆ ಈ ಚಾಳುಕ್ಯ ವಂಶದ ಮೂಲ ಪುರುಷರು ಒಕ್ಕಲ ಮಕ್ಕಳಾಗಿದ್ದರು. ಅವರು ಮೊದಲು ಮಣ್ಣಿನ ಮಕ್ಕಳಾಗಿದ್ದು ಪ್ರಭುಶಕ್ತಿ ಗಳಿಸಿ, ಒಂದು ರಾಜಕುಲವಾಗಿ ಬೆಳೆದರು. ಚಾಳುಕ್ಯರದು ಕೃಷಿಕ ಕುಟುಂಬವೆಂಬ ತೀರ್ಮಾನ ತಳೆಯಲು ನೆರವಾಗುವುದು ಈ ವಂಶದ ಪೊಲಕೇಸಿನ್ ಎಂಬ ಹೆಸರು.
ಪೊಲಕೇಸಿನ್(SIL.XX.4.683) ಲಕ್ಷ್ಮೇಶ್ವರ(ಧಾರವಾಡ ಇಂದಿನ ಗದಗ ಜಿಲ್ಲೆ, ಜಿ.ಶಿರಹಟ್ಟಿ.ತಾ): ಅದೇ 5.723: 5.723: ಅದೇ.6.730: ಅದೇ 7.735:SILXI.136.1091 ಆಲೂರು(ಧಾ. ಇಂದಿನ ಗದಗ ಜಿಲ್ಲಾ ಮುಂಡರಗಿ ತಾ) ಎಂಬ ಅಂಕಿತನಾಮ ರೂಪದಲ್ಲಿ ಎರಡು ಮುಕ್ತ ಆಕೃತಿಗಳಿವೆ: ಪೊಲ(ನ್)+ಕೇಸಿನ್, ಇವು ಮೂಲದ್ರಾವಿಡಕ್ಕೂ, ಪೂರ್ವದ ಹಳೆಗನ್ನಡಕ್ಕೂ ಸೇರಿದ ಶಬ್ದಗಳು. ಪೊಲ(ಹೊಲ)+ಕೇಸಿನ್(ಚೇಸಿನ್=ಮಾಡುವವನು)= ಪೊಲಕೇಸಿನ್ ಎಂದಾಗಿದೆ. ತೆಲಗು ಭಾಷೆಯಲ್ಲಿ ‘ಚೇಸಿನ’ ಎಂಬ ಕ್ರಿಯಾರೂಪಕ್ಕೆ ‘ಮಾಡಿದ’ ಎಂದೂ, ‘ಚೇಸಿನವಾರು’ ಎಂಬುದಕ್ಕೆ ‘ಮಾಡಿದವರು’ ಎಂದೂ ಅರ್ಥ. ಕೇಸಿನ್-ಚೇಸಿನ ಎಂಬುದು ತಾಲವೀಕರಣಗೊಂಡಿರುವ (palatalisation) ದ್ರಾವಿಡರೂಪ. ಇಂಥ ಇನ್ನೂ ಹತ್ತಾರು ಸಮಾನ-ಸದೃಶ ರೂಪಗಳಿವೆ. ಕೆಲವು ಉದಾ: ಕೇರ-ಚೇರ, ಕೆಯ್-ಚಯ್, ಕೆದರು-ಚೆದರ್, ಗೆದ್ದಲು-ಚೆದಲ್, ಕೆರೆ-ಚೆರೆವು. ಮೂಲದ್ರಾವಿಡ *ಕ್-ಸ್ವರÀವು, ಅದರ ಮುಂದೆ ಇಈ-ಎಏ ಎಂಬ ಪೂರ್ವ ಸ್ವರಗಳು (front vowels) ಬಂದಾಗ ಅದು ತಮಿಳು, ತೆಲಗು, ಹಾಗೂ ಮಲೆಯಾಳ ಭಾಷೆಗಳಲ್ಲಿ ಚ್-ಆಗುತ್ತದೆ. ಪೂರ್ವೇತರ ಸ್ವರಗಳಾದ (non-front vowels) ಅ, ಉ, ಒ, ಪರವಾದಾಗ ವ್ಯತ್ಯಾಸವಾಗುವುದಿಲ್ಲ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ, ಪೂರ್ವ-ಪೂರ್ವೇತರ ಸ್ವರಗಳಲ್ಲಿ ಯಾವುದೇ ಬಂದರೂ ಸ್ವನ ವ್ಯತ್ಯಾಸ ಸಂಭವಿಸದೆ *ಕ್-ಸ್ವರ ಅಬಾಧಿತವಾಗಿಯೇ ನಿಲ್ಲುತ್ತದೆ: ಉದಾ;(ಕನ್ನಡ) ಕಿರಿ, ಕೆಯ್, ಕೇರು, ಕೆದರು- ಈ ಶಬ್ದಗಳಿಗೆ ತಮಿಳು ತೆಲುಗು ಮಲೆಯಾಳ ಭಾಷೆಗಳಲ್ಲಿ ಕ್ರಮವಾಗಿ ಚಿರಿ, ಚೆಯ್-ಚೇತ, ಚೇರುಕ-ಚೆರುಗು, ಚೆದರು ಎಂದ ರೂಪಗಳಿವೆ(ಹಂಪ. ನಾಗರಾಜಯ್ಯ, ‘ದ್ರಾವಿಡ ಭಾಷಾ ವಿಜ್ಞಾನ’ ನಾಲ್ಕನೆಯ ಮುದ್ರಣ 1994). ಏಳನೆಯ ಶತಮಾನದ ತೆಲಗು ಶಾಸನಗಳಲ್ಲಿ ಕೇಸಿರಿ ಎಂಬ ಕಕಾರವೇ ಶಬ್ದದ ಆದಿಯಲ್ಲಿ ಪ್ರಯೋಗವಾಗಿರುವ ರೂಪಗಳಿವೆ. ಪನಿಕೇಸಿರಿ(ಪನಿಚೇಸಿರಿ)
ಪೊಲಕೇಸಿನ್ ಎಂಬುದು ‘ಹೊಲ ಮಾಡುವವನು’ ಎಂಬ ಅರ್ಥದ ಮಾತಾಗಿದೆ: ಒಕ್ಕಲ್ತನಂ ಕೆಯ್ವೊನ್ (IA.XIX ಸು.690. ಬಳ್ಳಿಗಾವೆ ಪು.144-45) ಇಂದಿಗೂ ಹೊಲ ಮಾಡಿಕೊಂಡಿದ್ದಾನೆ, ಹೊಲಗೆಯ್ಕೊಂಡಿದ್ದಾನೆ, ಹೊಲಗೆಯ್ಯಂಬುವು ರೈತಾಪಿ ಜನರ ರೂಢಿಯ ಮಾತುಗಳಾಗಿವೆ. ಪೊಲಕೇಸಿನ್(ಹೊಲಮಾಡುವವನು) ಎಂಬ ಹೆಸರಿನ ಸ್ತ್ರೀ ಪುರುಷರನ್ನು ಕನ್ನಡ ಶಾಸನಗಳು ಹೆಸರಿಸಿವೆ.
1. ಗಂಗರ ರಾಜರಲ್ಲಿ ಪೊಲವೀರನೆಂಬ ಕೊಙುಣಿ ಮಹಾರಾಜನಿದ್ದಾನೆ. ಈತನು ಗಂಗರ ದುರ್ವಿನೀತನ(495-535) ಒಬ್ಬ ಮಗ; ಇನ್ನೊಬ್ಬ ಮಗನೇ ಮುಷ್ಕರ. ಪೊಲವೀರನು ಸೇಂದ್ರಕ ವಿಷಯದಲ್ಲಿ ಪಲಚ್ಚೊಗೆ ಎಂಬ ಹಳ್ಳಿ ದತ್ತಿಯಿತ್ತನು (EC.IX (1990)537,ಕ್ರಿ.ಶ.6 ಶತಮಾನ, ತಗರೆ (ಹಾಸನ ಜಿ.ಬೇಲೂರು ತಾ.ಪು.472).
2. ನಾಗುಳರ ಪೊಲ್ಲಬ್ಬೆ ಮಾಡಿಸಿದ ಬಸದಿ [SII.XVIII,315, 859-60 ರಾಣೆಬೆನ್ನೂರು(ಧಾರವಾಡ ಜಿ.) ಪು.420]
3. ಪ್ರತಾಪಶಾಲಿಯುಮಪ್ಪ ಹೊಲ್ಲಗಾವುಂಡನ ಗುಣ ಪ್ರಭಾವಂ [B.K.No.108 of 1926-27;BK.51,1155] 4. ನೊಳಂಬ ಪೊಲವೀರನೆಂಬುವನು ಗಂಗರ ಪೃಥ್ವೀಪತಿ ದಿಡಿಗ ರಾಜನ ಮೇಲೆ ದಂಡೆತ್ತಿ ಬಂದ ದಾಖಲೆಯಿದೆ.
ಇದುವರೆಗಿನ ಚರ್ಚೆಯ, ಮಂಥನದ ಸಾರಾಂಶ
1. ಚಾಳುಕ್ಯರದು ‘ಚಳುಕ್ಯ’ ಕುಲ. ಅವರ ವಿವಿಧ ಪ್ರಾಚೀನ ರೂಪಗಳು ಹ್ರಸ್ವ ಸ್ವರಾದಿಯಾದ ಚಳುಕಿ, ಸಳುಕಿ, ಚಳುಕ್ಯ, ಚಲಿಕ್ಯ, ಚಲ್ಕ್ಯ ಎಂಬುವಾಗಿವೆ. ಇವುಗಳನ್ನು ಸಲಿಕೆ, ಸಲಾಕಿ ಎಂಬ ಕೃಷಿಕ ಉಪಕರಣಗಳೊಂದಿಗೆ ಸಮೀಕರಿಸಬಹುದು.
2. ಚಳುಕಿ-ಸಳುಕಿ ಎಂಬ ಶಬ್ದಗಳು ನೆಲ, ಮಣ್ಣು ಎಂಬರ್ಥದ ಶಬ್ದಗಳಿಗೆ ಹೊಂದಿವೆ. ಇವು ದ್ರಾವಿಡ ಮೂಲದ ಶಬ್ದಗಳಾಗಿದ್ದು ಇದರ ಜ್ಞಾತಿ ರೂಪಗಳು, ಜ್ಞಾತಿ ಭಾಷೆಗಳಲ್ಲಿ, ಸಮಾನ ಅರ್ಥ ಪ್ರಭೇದಗಳಿಂದ ಕಂಡುಬರುತ್ತವೆ. ಆದ್ದರಿಂದ ಇವನ್ನು ಸಂಸ್ಕøತದಿಂದ ನಿಷ್ಪನ್ನ ಮಾಡುವುದು ಸರಿಯಲ್ಲ; ದ್ರಾವಿಡ ರೂಪವೇ ಸಂಸ್ಕøತೀಕರಣಗೊಂಡಿದೆ.
3. ‘ಪೊಲಕೇಸಿನ್’ ಎಂಬ ಶಬ್ದದ ಮೂಲ ಅರ್ಥವೂ ಸಹ ಒಕ್ಕಲುತನಕ್ಕೆ ಸೇರಿದ್ದಾಗಿದೆ. ಪೊಲಕೇಸಿನ್ ಎಂದರೆ ನೆಲದೊಡೆಯ, ನೆಲ ಸಂಬಂಧದ ಕೆಲಸ ಮಾಡುವಾತ ಎಂದರ್ಥ.
4. ಚಾಳುಕ್ಯರದು ಒಕ್ಕಲು ಮೂಲದ ಮನೆತನ, ಕೃಷಿಕ ಕುಟುಂಬ.
5. ಚಾಳುಕ್ಯರು ಮೂಲತಃ ಬಿಜಾಪುರ ಜಿಲ್ಲೆಯ ಬಾದಾಮಿ, ಶಿರಹಟ್ಟಿ ಸುತ್ತಲ ರೈತಾಪಿಗಳು. ಸ್ವಸಾಮಥ್ರ್ಯ ಮತ್ತು ರಾಜಕೀಯ ಮಹತ್ವಾಕಾಂಕ್ಷೆಯಿಂದ ಈ ಒಕ್ಕಲ ಕುಟುಂಬದ ಪೊಲವೀರರು ದೊಡ್ಡ ಸಾಮ್ರಾಜ್ಯವನ್ನಾಳುವಷ್ಟು ಬಲಿಷ್ಟರಾದರು. ರಾಷ್ಟ್ರಕೂಟರೂ ಮೊದಲಿಗೆ ಒಕ್ಕಲಿಗರೆಂಬುದಕ್ಕೆ ಅವರ ರಾಜ ಲಾಂಛನದಲ್ಲಿ ನೇಗಿಲು ಇರುವುದು ಸಾಕ್ಷಿ. ಗಂಗರೂ ರೈತರಿದ್ದಿರಬಹುದು.
6. ಚಾಳುಕ್ಯ ಎಂಬ ಶಬ್ದಕ್ಕೆ ದೈವ ಮೂಲದ ಊಹಾತ್ಮಕ ನಿಷ್ಪತ್ತಿಗಿಂತ ಮನುಷ್ಯ ಮೂಲದ ನಿಷ್ಪತ್ತಿಯಲ್ಲಿರುವ, ವಾಸ್ತವತೆಗೆ ಹತ್ತಿರವಾಗುವ ಸಮಂಜಸತೆಯನ್ನು ಪ್ರಾಜ್ಞರಾದ ಚರಿತ್ರಕಾರರು ಪರಿಭಾವಿಸಬೇಕು.
7. ಬೆಳ್ವೊಲ[*ವೆಳ್+ಪೊಲ(ನ್)=ವೆಳ್ವೊಲ, ಬೆಳ್ವೊಲ, ಬೆಳ್ವಲ] ಎಂಬಲ್ಲಿ ಉತ್ತರಾರ್ಧವಾಗಿ ಇರುವ ಶಬ್ದ ರೂಪವೂ ‘ಪೊಲ’ ಎಂಬುದೇ. ಬೆಳ್ವೊಲ ಮುನ್ನೂರರ ಪ್ರದೇಶದವರು ಚಾಳುಕ್ಯ ಕುಲಜರು.
8. ಪುಲಿಗೆರೆ-ಪುರಿಕರ ಎಂಬ ಸ್ಥಳವಾಚಿ ಶಬ್ದಗಳಿಗೂ ಪೊಲಗೆರೆ(ಹೊಲದಕೆರೆ) ಎಂಬುದು ಮೂಲ ಪ್ರಾಚೀನ ರೂಪವಿರಬಹುದು. ಪುರಿಕರನಗರಿ ಎಂಬುದು ಇದರ ಸಂಸ್ಕøತ ರೂಪ. ಪೊಲಗೆರೆ-ಪುಲಿಗೆರೆ(ಲಕ್ಷ್ಮೇಶ್ವರ): ಇದರಂತೆಯೇ ಪೊಲಕೇಸಿನ್-ಪುಲಿಕೇಸಿ ಎಂಬ ಬೆಳವಣಿಗೆಯನ್ನು ಮನಗಾಣಬಹುದು.
9. ಚಾಳುಕ್ಯರಿಗೆ(ಪೊ)ಪುಲಿಗೆರೆಯೇ ಮೂಲ ಸ್ಥಳವಿರಬೇಕು. ಪುಲಿಗೆರೆಯ ಸಂಖಬಸದಿಯು ಬಾದಾಮಿ ಚಾಳುಕ್ಯರ ಮನೆದೇವರು, ಪಟ್ಟ ಜಿನಾಲಯ. ಈ ಕಾರಣಕ್ಕಾಗಿಯೇ ಬಾದಾಮಿ ಚಾಳುಕ್ಯರು, ಕಲ್ಯಾಣಿ ಚಾಳುಕ್ಯರು ಒಂದೇ ಸಮನೆ ಪುಲಿಗೆರೆಯ ಶಂಖ ಜಿನಾಲಯಕ್ಕೆ ದಾನ ದತ್ತಿಗಳನ್ನು ಪುನರ್ಭರಣಗೊಳಿಸುತ್ತ ಭಕ್ತಿಯಿಂದ ನಡೆದುಕೊಂಡರು.
ಈ ಚರ್ಚೆಯಲ್ಲಿ ಹಂಪನಾಗರಾಜಯ್ಯನವರು ತಮ್ಮ ಕನ್ನಡ ಮತ್ತು ಇತರೇ ಭಾರತೀಯ ಭಾಷೆಗಳ ಜ್ಞಾನದಿಂದ ಒದಗಿರುವ ವಿಷಯಗಳು, ಪದಗಳು ಮತ್ತು ಕೆಲವು ಊಹೆಗಳನ್ನು ಮಾಡಿ ಚಾಲಕ್ಯರು ಮೂಲತಃವಾಗಿ ರೈತರಾಗಿದ್ದರು, ಅವರಂತೆಯೇ ರಾಷ್ಟ್ರಕೂಟರು ಹಾಗೂ ಗಂಗರೂ ಸಹ ಹೊಲ ಮಾಡಿಕೊಂಡಿದ್ದ ಕುಟುಂಬದವರಾಗಿದ್ದರು ಎಂಬ ವಿಷಯವನ್ನು ತುಂಬಾ ಶಾಸ್ತ್ರೀಯವಾಗಿ ನಿರೂಪಿಸಿದ್ದಾರೆ.
ನಾನು ಅವರ ವಾದವನ್ನು ಸಂಪೂರ್ಣವಾಗಿ ಒಪ್ಪಿ ಅವರ ವಾದಕ್ಕೆ ಪುಷ್ಠಿಕೊಡಲು ನನ್ನ ಸುಮೇರಿಯನ್ ಅಧ್ಯಯನದಿಂದ ದೊರಕಿರುವ ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದೇನೆ.
ಸುಮೇರಿಯನ್ ಭಾಷೆಯಲ್ಲಿ; ‘ಳು’ ಅಥವಾ ‘ಲು’ ಎಂದರೆ ವ್ಯಕ್ತಿ, ಆಳು, ಮನುಷ್ಯ, ದೊರೆ, ರಾಜ ಎಂಬ ಅರ್ಥಗಳಿವೆ. ‘ಕಿ’ ಎಂದರೆ, ಭೂಮಿ, ನೆಲ, ಹೊಲ, ಮಾಳ ಎಂಬ ಅರ್ಥಗಳಿವೆ.
ಈ ಎರಡು ಪದಗಳೊಂದಿಗೆ ಸುಮೇರಿಯನ್ ಭಾಷೆ ಮತ್ತು ಅಕ್ಕಾಡಿಯನ್ ಭಾಷೆಗಳಲ್ಲಿ ರಾಜ ಹಾಗೂ ರಾಜನಿಗೆ ಸಂಬಂಧಿಸಿದ ಪದಗಳನ್ನು ಕೆಳಗೆ ನೀಡಿರುತ್ತೇನೆ.
1. HuSma(King) wr. HuS-ma “King” Akk. Sarru
2. UNgal (Ruler) wr.UN-gal “ruler” Akk. sarru; Sarratu
3. barag(DAIS) wr.barag; bara; “ruler, king; dais seat” AKK.parakku; Sarru; subtu.
4. lugal (King)wr.lugal; lu-gal; lord; master; Owner; king; a quality designation”
AKK.lu; Sarru
5. Sag(King) wr.Sag “King” AKK. Sarru
6. taskarin(King)wr.taskarin “king”
7. nambarag(Royalty) wr.nam-barag “royalty” AKK.Sarrutu
8. namen(Priesthood)wr.nam-en “the office of en-priest; kingship” AKK.enutu; belutu
9. namlugal(kingship)wr.nam-lugal “kingship”
Sag-lu-ki
– ಸಂಗಾ-ಲು-ಕಿ/ಸಂಗಾ-ಳು-ಕಿ
– ಸಂಗ್-ಲು-ಕಿ/ಸಂಗ್-ಳು-ಕಿ
– ಸಾಂ(ಸಂ)ಳುಕಿ/ಸಾ(ಸ)ಳುಂಕಿ
-ಚಾ(ಚ)ಳುಂಕಿ/ಚಲುಕಿ/ಚಾಳುಕಿ/ಚಾಲುಕಿ
-ಚಾಳುಕಿಯ/ಚಾಲುಕಿಯ/ಚಾಳುಕ್ಯ/ಚಾಲುಕ್ಯ
‘ಚಾ’ ಎಂದರೆ ರಾಜ ಎಂಬ ಅರ್ಥವಿದೆ. ಅದನ್ನು ‘ಶಾ” ಎಂದು ಕೆಲವರು ಹಾಗು ‘ಸಾ’ ಎಂದು ಕೆಲವರು ಉಚ್ಚರಿಸುತ್ತಾರೆ. ಇರಾನಿನ ದೊರೆಗಳಿಗೆ ‘ಶಾ’ ಎನ್ನುತ್ತಿದ್ದುದನ್ನು ನೆನಪಿಸಿಕೊಳ್ಳಿರಿ, ಇಲ್ಲಿ ಚಾಲುಕಿ ಎಂದರೆ ದೊರೆ-ದೊರೆ-ಭೂಮಿ ಅಥವಾ ರಾಜ-ರಾಜ-ರಾಜ್ಯ ಅಥವಾ ದೊಡ್ಡರಾಜ-ರಾಜ್ಯ, ಅಥವಾ ನಾಡಿನ ದೊಡ್ಡದೊರೆ ಅಥವಾ ಈ ಭೂಮಿಯ ಮಹಾರಾಜ ಎಂದು ಅರ್ಥ.
ಇಲ್ಲಿ ನಾನು ಹೇಳುವ ‘ಚ’ ಕಾರ ಮೊದಲು ಬಂದಿದೆ ನಂತರ ‘ಸ’ ಕಾರ ಬಂದಿದೆ ಎಂಬುದು ಮುಖ್ಯ. ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಪಟ್ಟಣಗಳಲ್ಲಿರುವ ಚಾಲುಕ್ಯರ ಕಟ್ಟಡಗಳಿಗೆ ಬೇಕಾದ ಕಲ್ಲುಗಳನ್ನು ಶಂಕರಲಿಂಗನ ಗುಡ್ಡದಿಂದ ಮತ್ತು ಮೊಟರ ಮರಡಿಗುಡ್ಡಗಳಿಂದ ಪಡೆಯಲಾಗಿವೆ. ಶಂಕರಲಿಂಗನ ಗುಡ್ಡದ ಮೇಲೆ ಇರುವ ಶಾಸನಗಳಲ್ಲಿ ಒಂದು ಶಾಸನ(5)ಪಾಠ ಈ ಕೆಳಗಿನಂತಿದೆ.
1. ಶ್ರೀ.ಧರ್ಮ ಸಂಗಾತನ ಕಣಿ
2. ಪಪಾಕೋ ಆಜ್ಞಾವೋ ಪರಮ ಮಾ
3. ಹೇಶ್ವರ
ಇಲ್ಲಿ ಕಂಡುಬರುವ ಪದ ಸಂಗಾ ಎಂದರೆ ದೊರೆ ಆ ದೊರೆಯ ಕಣಿ ಅಲ್ಲಿತ್ತು. ಚಾಲುಕ್ಯರುಗಳೇ ಮರಾಠ ನಾಡಿನಲ್ಲಿ ಸಾಳುಂಕಿಗಳು ಎಂದು ಹೆಸರಾದವರು. ಇವರೇ ಚಲವಾದಿಗಳು ಎನಿಸಿಕೊಳ್ಳುವವರು ಭಾರತದಲ್ಲಿ ಆಸ್ತಿ-ಪಾಸ್ತಿ ಅಧಿಕಾರ ಬಂದಾಗ ದೊಡ್ಡ ಮನುಷ್ಯರು ಅನಿಸಿಕೊಂಡವರ ಜಾತಿ ದೊಡ್ಡವರ ಅಥವಾ ಮೇಲು ಜಾತಿ ಆಗುತ್ತದೆ. ಇಲ್ಲವಾದರೆ ಕೀಳು(ಕೀಳು- ಭೂಮಿಯವರು, ಭೂಮಿ ಒಡೆಯ, ಭೂಮಿ ಆಳುವವರ ಎಂಬ ಅರ್ಥ ಹೋಗಿ) ಹೀನ ಜಾತಿ ಎನಿಸಿಕೊಳ್ಳುತ್ತದೆ.
ಈ ಚರ್ಚೆಯಿಂದ ನಾನು ಬಾಗಲಕೋಟೆಯ ಚಲವಾದಿಗಳು(ಛಲವಾದಿಗಳು, ಚಲುವಾದಿಗಳು) ಒಂದು ಕಾಲದಲ್ಲಿ ಈ ದೇಶವನ್ನು ಆಳಿದ ಚಾಲುಕ್ಯ ದೊರೆಗಳು ಎಂದು ಹೇಳಿಕೊಂಡರೆ ಅದನ್ನು ನಂಬುತ್ತೇನೆ ಹಾಗೂ ಅವರ ಹೇಳಿಕೆಯು ಸರಿ ಎಂದು ಒಪ್ಪುತ್ತೇನೆ.
-ಮಾಳವದೊರೆ ನಂಜುಂಡಸ್ವಾಮಿ, ಐಪಿಎಸ್, ಬೆಂಗಳೂರು