ಹರಪನಹಳ್ಳಿ, ಡಿ.16: ಪಟ್ಟಣದ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಮುಖಿ ದಂಪತಿಗಳಾದ ಗುಂಡಗತ್ತಿ ಸಿ.ಕೊಟ್ರಪ್ಪ ಮತ್ತು ಸಿ.ಕೊಟ್ರಮ್ಮ ದಂಪತಿಗಳ ಏಕೈಕ ಪುತ್ರ ಯರಿಸ್ವಾಮಿ(ತರುಣ್) ಮತ್ತು ಮರಿಯಮ್ಮನಹಳ್ಳಿಯ ಸಿ. ಪರಶುರಾಮ ಮತ್ತು ಉಚ್ಚೆಂಗೆಮ್ಮ ಅವರ ಪುತ್ರಿ ಸುಲೋಚನ ಅವರ ವಿವಾಹವು ಭಾನುವಾರ ವಿಜೃಂಭಣೆಯಿಂದ ಜರುಗಿತು.
ಹಗರಿಬೊಮ್ಮನಹಳ್ಳಿಯ ಹರ ಕಲ್ಯಾಣ ಮಂಟಪದಲ್ಲಿ ಜರುಗಿದ ವಿವಾಹ ಮಹೋತ್ಸವದಲ್ಲಿ ತರುಣ್ ಮತ್ತು ಸುಲೋಚನ ಸಪ್ತಪದಿ ತುಳಿದರು.
ಈ ಸಂಭ್ರಮದ ಗಳಿಗೆಗೆ ನಾಡಿನ ಗಣ್ಯಾತಿಗಣ್ಯರು ಸಾಕ್ಷಿಯಾದರು ಮಾತ್ರವಲ್ಲ ನವ ವಧುವರರಿಗೆ ಶುಭ ಹಾರೈಸಿದರು.
ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಿ.ಪಿ ದೇವರಾಜ್,
ಮಾಜಿ ಸಚಿವ ಬಿ. ಶ್ರೀರಾಮುಲು, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಆಯೋಗದ ಮಾಜಿ ಅಧ್ಯಕ್ಷ ನೆಹರು ಓಲೇಕಾರ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಬೆಂಗಳೂರು ಫಿಂಗರ್ ಪ್ರಿಟ್ ಬ್ಯೂರೋದ ಎಸ್ಪಿ ಕುಮಾರಸ್ವಾಮಿ, ವಿಧಿ ವಿಜ್ಞಾನ ಪ್ರಯೋಗಾಲಯದ ಹಿರಿಯ ಅಧಿಕಾರಿಗಳಾದ ದಿವಾಕರ್, ಮಂಜುನಾಥ್, ಅಬಕಾರಿ ಇಲಾಖೆಯ ನಿವೃತ್ತ ಡಿಸಿ ಬಿ.ಡಿ.ಸಾವಕ್ಕನವರ್, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ನ್ಯಾಯವಾದಿ ಸಿ.ಬಸವರಾಜ್, ಪತ್ರಕರ್ತ ಸಿ. ಶಿವಾನಂದ,
ಹಾವೇರಿ ಜಿಲ್ಲಾ ಸಿಎಂಎಸ್ ಮಾಜಿ ಅಧ್ಯಕ್ಷ ಶಂಬು ಕಳಸದ್, ಹಗರಿ ಬೊಮ್ಮನಹಳ್ಳಿ ತಾಲೂಕು ಸಿಎಂಎಸ್ ಅಧ್ಯಕ್ಷ ಕಹಳೆ ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಜಿಲ್ಲಾ ಛಲವಾದಿ ಸಮಾಜದ ಗಣ್ಯರು ನವ ವಧುವರರಿಗೆ ಶುಭ ಹಾರೈಸಿದರು.
ಯರಿಸ್ವಾಮಿ(ತರುಣ್) ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅಧಿಕಾರಿಗಳಾಗಿ, ಸುಲೋಚನ ಜೆಸ್ಕಾಂನಲ್ಲಿ ಕಿರಿಯ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
—–