ಅನುದಿನ‌ ಕವನ-೧೪೫೮, ಹಿರಿಯ ಕವಿ: ಡಾ.ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ: ಕಲ್ಲರಳಿ

ಕಲ್ಲರಳಿ


ಮೇಣ
ಮಿದ್ದಿದ
ಹಾಗೆ,
ಕಲೆಯರಳಿದೆ
ಇಲ್ಲಿ
ಕಲ್ಲುಗಳಲ್ಲಿ;
ಜೀವ-
ದುಂಬಿದೆ
ಸ್ಥಾವರಗಳೊಳಗೆ,
ಧ್ಯಾನಸ್ಥ
ಶಿಲ್ಪಿಗಳ
ಕೈಚಳಕಗಳಲ್ಲಿ.


-ಡಾ. ಬಸವರಾಜ ಸಾದರ, ಬೆಂಗಳೂರು