ಬಳ್ಳಾರಿ,ಫೆ.1: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ವಸಂತಕುಮಾರ ಪೂರ್ಮ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಲಭಿಸಿದೆ.
ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಜ್ಯೋತಿಲಿಂಗ.ವಿ ಅವರ ಮಾರ್ಗದರ್ಶನದಲ್ಲಿ ‘ವರ್ಕ್ ಲೈಫ್ ಬ್ಯಾಲೆನ್ಸ್ ಆಮಾಂಗ್ ಪ್ರೊಫೇಶನಲ್ಸ್ ಎ ಸ್ಟಡಿ ಆಫ್ ಸೆಲೆಕ್ಟೆಡ್ ಪ್ರೋಫೆಶನಲ್ಸ್ ಇನ್ ಕಲ್ಯಾಣ ಕರ್ನಾಟಕ’ ಎಂಬ ಶೀರ್ಷಿಕೆ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕಾಗಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಹೆಚ್ಡಿ ಪದವಿ ನೀಡಿ ಗೌರವಿಸಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
———–