ಬಳ್ಳಾರಿ, ಫೆ.12: ಬಳ್ಳಾರಿ ಮಹಾನಗರದ ಕುಲದೈವ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ರಥೋತ್ಸವ ಬುಧವಾರ ಸಂಜೆ ನಡೆಯಿತು.
ಶಾಸಕ ನಾರಾ ಭರತ್ ರೆಡ್ಡಿಯವರು ಮಧ್ಯಾಹ್ನ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ತೇರನ್ನು ಎಳೆದು ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು. ಈ ವೇಳೆ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಸ್ಥಳೀಯ ಮುಖಂಡರಾದ ಬೆಣಕಲ್ ರಘು, ಹರಿಶಂಕರ್ ಮೊದಲಾದವರು ಹಾಜರಿದ್ದರು.
ಬಳಿಕ ಗಣ್ಯರು ಕೋಟೆ ಪ್ರದೇಶದಲ್ಲಿರುವ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಲಡ್ಡು ವಿತರಣೆ: ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ರಥೋತ್ಸವ ಹಿನ್ನೆಲೆ ತೇರು ಬೀದಿಯಲ್ಲಿ ಶಾಸಕ ನಾರಾ ಭರತ್ ರೆಡ್ಡಿಯವರು ಪ್ರಸಾದದ ರೂಪದಲ್ಲಿ 10 ಸಾವಿರ ಮೋತಿ ಚೂರ್ ಲಡ್ಡುಗಳನ್ನು ವಿತರಿಸಿದರು.