ಶರತ್ ಕುಮಾರ್ ಪತ್ತಾರ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ

ಬಳ್ಳಾರಿ, ಫೆ.13:ನಗರದ ಶರತ್ ಕುಮಾರ್ ಪಿ. ಅವರಿಗೆ ಕುವೆಂಪು ವಿಶ್ವವಿದ್ಯಾಲಯದ ಜೈವಿಕ ಶಾಸ್ತ್ರ ವಿಭಾಗದ ಪೂರ್ಣಕಾಲಿಕ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.

ಶರತ್ ಕುಮಾರ್ ಅವರು ಮಂಡಿಸಿದ ‘Insilico Structural and Function alanalysis Orzynes with Special reference to Insecticicle resistance’ ಎಂಬ ಮಹಾ ಪ್ರಬಂಧಕ್ಕೆ  ಕುವೆಂಪು ವಿಶ್ವವಿದ್ಯಾಲಯವು ಶಿವಮೊಗ್ಗದಲ್ಲಿ ಈಚೆಗೆ ಜರುಗಿದ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ನೀಡಿ ಗೌರವಿಸಿತು.

ಡಾ. ಶರತ್ ಕುಮಾರ್ ಅವರು ನಗರದ ಎಂಬಿಎಸ್ ಎಲ್ ಶಾಲೆಯಲ್ಲಿ ಮೂವತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳ ಮೆಚ್ಚಿನ ಆದರ್ಶ ಶಿಕ್ಷಕ ಕಾಳಪ್ಪ ಪತ್ತಾರ್ ಅವರ ಪುತ್ರರು.

ಡಾ.ರಿಯಾಜ್ ಮೊಹಮ್ಮದ್, ನಿವೃತ್ತ ಪ್ರಾಧ್ಯಾಪಕರು, ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಮಾಹಿತಿ ಶಾಸ್ತ್ರದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ ಹಾಗೂ ಜೈವಿಕ ಮಾಹಿತಿಶಾಸ್ತ್ರಿ ಇವರ ಮಾರ್ಗದಲ್ಲಿ ಹಾಗು ಆ. ಸುಶಿಲ್ ಕುಮಾರ ಜಲಾಜಿ ವಿಜ್ಞಾನಿ ಡಾ. ಎಸ್. ಕೆ. ಜಲಾಲಿ, ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಆಣ್ವಿಕ ಕೀಟಶಾಸ್ತ್ರ ವಿಭಾಗ, ರಾಷ್ಟ್ರೀಯ ಕೃಷಿ ಬ್ಯೂರೋ, ಪ್ರಮುಖ ಕೀಟಗಳ, (NBAII), ಬೆಂಗಳೂರು. ಇವರ ಸಹ ಮಾರ್ಗದರ್ಶನದಲ್ಲಿ ಶರತ್ ಕುಮಾರ್ ಅವರು   ಸಂಶೋಧನಾ ಪ್ರಬಂಧ ಸಿದ್ಧಪಡಿಸಿ ವಿವಿಗೆ ಮಂಡಿಸಿದ್ದರು.