ಹೊಸಪೇಟೆ ಅಂಜುಮನ್ ಖಿದ್ಮತೇ ಇಸ್ಲಾಂ ಶಾಲಾ ಕೊಠಡಿ ನಿರ್ಮಾಣಕ್ಕಾಗಿ 10 ಲಕ್ಷ ರೂ. ದೇಣಿಗೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ

ವಿಜಯನಗರ/ಬಳ್ಳಾರಿ, ಫೆ.17: ವಿಜಯನಗರ ಜಿಲ್ಲೆ ಹೊಸಪೇಟೆಯ ಅಂಜುಮನ್ ಖಿದ್ಮತೇ ಇಸ್ಲಾಂ ಕಮಿಟಿಯು ನಗರದ ಎಸ್ಆರ್ ನಗರದಲ್ಲಿ ನಿರ್ಮಿಸುತ್ತಿರುವ ಅಂಜುಮನ್ ಪಬ್ಲಿಕ್ ಸ್ಕೂಲ್ ನ ಕಟ್ಟಡದ ನಿರ್ಮಾಣಕ್ಕಾಗಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ 10 ಲಕ್ಷ ರೂ.ಗಳ ವೈಯಕ್ತಿಕ ದೇಣಿಗೆಯನ್ನು ನೀಡಿದರು.
ಭಾನುವಾರ ಹೊಸಪೇಟೆಯ ಖಿದ್ಮತೆ ಅಂಜುಮನ್ ಇಸ್ಲಾಂ ಕಮೀಟಿಯ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ನಾರಾ ಭರತ್ ರೆಡ್ಡಿಯವರು ದೇಣಿಗೆ ನೀಡಿದರು.
ಕಳೆದ ತಿಂಗಳು ಬಳ್ಳಾರಿಗೆ ಬಂದಿದ್ದ ಅಂಜುಮನ್ ಕಮಿಟಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬಳ್ಳಾರಿ ಶಾಸಕರಾದ ನಾರಾ ಭರತ್ ರೆಡ್ಡಿಯವರನ್ನು ಭೇಟಿಯಾಗಿ ಅಂಜುಮನ್ ಕಮಿಟಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಅಂಜುಮನ್ ಪಬ್ಲಿಕ್ ಸ್ಕೂಲ್ ನ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ವಿನಂತಿಸಿದ್ದರು.
ಶಾಸಕ ನಾರಾಭರತ್ ರೆಡ್ಡಿ 10 ಲಕ್ಷ ದೇಣಿಗೆ ನೀಡುವುದಾಗಿ ವಾಗ್ದಾನ ನೀಡಿದ್ದರು.
ಇದೇ ಸಂದರ್ಭದಲ್ಲಿ ಅಂಜುಮನ್ ಕಮಿಟಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಅಂಜುಮನ್ ಕಮಿಟಿಯ ಅಧ್ಯಕ್ಷ ಇಮಾಮ್ ನಿಯಾಜಿ, ಉಪಾಧ್ಯಕ್ಷರಾದ ಎಂ.ಎಂ.ಫೈರೋಜ್ ಖಾನ್, ಕಾರ್ಯದರ್ಶಿ ಅಬೂಬಕ್ಕರ್ ಅಶ್ರಫಿ, ಖಜಾಂಚಿ ಆನ್ಸರ್ ಭಾಷಾ ಅಶ್ರಫಿ, ಸಹ ಕಾರ್ಯದರ್ಶಿ ದರ್ವೇಶ್ ಮೋಹಿನುದ್ದೀನ್, ವಕೀಲ ಮೊಹಸೀನ್, ಗುಲಾಂ ರಸೂಲ್ ಸೇರಿದಂತೆ ಸಮಾಜದ ಕೆಲ ಮುಖಂಡರು ಉಪಸ್ಥಿತರಿದ್ದರು.