ದೇವರ ಹುಡುಕುವ
ಹರಸುವ ಎಲ್ಲ
ಬೊಗಸೆ ಕೈಗಳು
ನಿನ್ನ ಪಾದ ಮುಟ್ಟಿ
ಪುನೀತವಾಗಬೇಕು ಬುದ್ದ…
ನಾನೇಗೆ ಈ ಜನರಿಗೆ ಹೇಳಲಿ
ಕಲ್ಲಿಗೆ ಜೀವವಿಲ್ಲವೆಂಬ ಸತ್ಯವ
ಹಾಗೆ ಹೇಳಿ ಪದೆ ಪದೆ
ನಿರ್ಲಕ್ಷ್ಯಕ್ಕೊಳಗಾದವ ನಾನು
ಆದರೂ ನೀ ನನ್ನರಿವಿನ ಜೋಳಿಗೆ ತುಂಬಿದ
ಸತ್ಯದ ಬೆಳಕೆಂದು ಅವರಿಗೆ
ನಾಳೆ,ನಾಳಿದ್ಧು ಅರಿವಿಗೆ ಬರಬಹುದು…
ಯಾವುದರ ಅರಿವಿಲ್ಲದ
ಗಡಿಯಾಚೆಗಿನ ಜನ
ನಿನ್ನ ಒಪ್ಪಿ ಸಮತೆಯ ಧ್ವಜ ಹಾರಿಸಿದ್ದಾರೆ
ಆದರೆ ನೀ ನಡೆದ ನಿನ್ನ ಮಣ್ಣಿನ ಜನರೋ
ಬೀದಿಯಲ್ಲೆ ನಿಂತಿನ್ನೂ ಪ್ರತಿಭಟಿಸುತ್ತಿದ್ದಾರೆ
ನಿನ್ನ ಧಮ್ಮದ ಕುರಿತು ಅವರ ಮಿದುಳ ತಿರುಳಿಗಿನ್ನು
ಜ್ಞಾಪಕ ಬಂದಿಲ್ಲ ನೋಡು…
-ಸಿದ್ದು ಜನ್ನೂರ್, ಚಾಮರಾಜನಗರ
—–