ಅನುದಿನ ಕವನ-೧೫೩೬, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು

ಪುನಃ….ಪುನಃ..
ನಿನ್ನ ನೆನಪಿನಾಳದ ಭಾವ ಕಡಲಿಗೆ ಧುಮುಕುತ್ತೇನೆ.
ನಿನ್ನ ನೋಡುವ ಕಾತುರದಿ….ಕೌತುಕದಿ.!
ಈಜುತ್ತೇನೆ….ಈಜುತ್ತೇನೆ…
ಕೈಕಾಲು ಸೋತರೆ ವಾಸ್ತವದ ದಡಕ್ಕೆ ಬಂದು ಕೊಂಚ ವಿರಮಿಸುತ್ತೇನೆ.!
ಪುನಃ ಏಕಾಂತದಿ ನಿನ್ನ ಬಿಟ್ಟಿರಲಾಗದ ಭಾವ ಆವರಿಸಿ ಕಲ್ಪನೆಯ ನಿನ್ನ ನೆನಪಿನ ಕಡಲಿಗೆ ಧುಮುಕುತ್ತೇನೆ.!
ಭಾವ ಕಡಲಲಿ ಈಜುತ್ತೇನೆ….ಈಜುತ್ತೇನೆ…

ಎಂದಾದರೊಮ್ಮೆ ನೀ ಮುಖಾಮುಖಿಯಾಗಬಹುದು ಎಂಬ ಆಸೆಯಲ್ಲಿ…..ಮೈ ಮರೆಯುತ್ತೇನೆ….
ಈಜುತ್ತೇನೆ… ಈಜುತ್ತೇನೆ….
ನಾ ನೆನಪಿನ ಭಾವ ಕಡಲಲಿ..!
ನೀ ವಾಸ್ತವಕೆಂದು ಸಿಗಲಾರೆ ಎನ್ನುವ ಅರಿವಿದ್ದರೂ!

ಇಂತಿ ನಿನ್ನ ನೆನಪು.!

-ಶಾಂತಾ ಪಾಟೀಲ್, ಸಿಂಧನೂರು