ಇಲ್ಲಸಲ್ಲದ ಮಾತುಗಳ ಬಿತ್ತರ ಮಾನವೀಯ ಮೌಲ್ಯಗಳ ತತ್ತರ ಬದುಕಿಗೆ ಎಲ್ಲಿದೆ ಉತ್ತರ ಇಂದಿನ ಜೀವನ ಸಾಗಿಸಲು ದುಸ್ತರ
ಮನದಲ್ಲಿ ಮೂಡಲಿ ಒಳ್ಳೆಯ ವಿಚಾರ
ಆಗ ನಿನ್ನ ಮನಸ್ಸು ವಿಸ್ತಾರ
ಆಗ ಬರುವರು ನಿನ್ನ ಹತ್ತಿರ
ಜನರಿಗೆ ನೀನೆಂದರೆ ಕಾತರ
ತಿಳಿಯಿರಿ ಅವರ ವಿಚಾರ
ಅವರ ಬಗ್ಗೆ ಇರಲಿ ಕಾತರ
ಮಾಡದಿರು ಆತುರ
ಹಬ್ಬಿಸದಿರಿ ಅಪಪ್ರಚಾರ
ಬಿಡು ಕಪಟಿಗಳ ವಿಚಾರ.
ಕಿತ್ತೇಸೆದುಬಿಟ್ಟು ಕಂದಾಚಾರ
ಮನಸು ಇರಲಿ ವಿಸ್ತಾರ.
ಬೆಳೆಯುವೆ ನೀನಿನ್ನು ಎತ್ತರ
ಮಾತಿನಲ್ಲಿ ಚತುರ
ಗುಣದಲ್ಲಿ ಬಂಗಾರ
ಅರಿತಿರುವನು ಸಂಸ್ಕಾರ
ಆಗ ನಿನ್ನ ಜೀವನ ಅಮರ
ಅಪ್ಪ ಅಮ್ಮನಲ್ಲಿ ಕಾಣುವನು ದೇವರ
ಕಾಯಕ ಮಾಡುವ ತರ ತರ
ಕಾಯಕಕ್ಕಾಗಿ ಹರಿಸುವನು ಬೆವರ
ಆಗಾಗಿ ದುಡಿಮೆಯೇ ಇವನ ಆಧಾರ
-ಚಿನ್ನಸ್ವಾಮಿ ಎಸ್
ಸರಗೂರು,
ನಂಜನಗೂಡು ತಾಲೂಕು