ಅನೂಹ್ಯ ಕವನ.!
ಸುಸ್ವರ ಅಪಸ್ವರಗಳ
ರಾಗ ವಿರಾಗಗಳ
ಮಹಾನ್ ಕೀರ್ತನ.!
ಸಹಸ್ರ ಭಾವಗಳ
ಬಗೆಬಗೆ ಬಣ್ಣಗಳ
ಮಯೂರ ನರ್ತನ.!
ರಂಗು ರಂಗಿನಾಟದ
ಮಾಯಾ ಛಾಯೆಯ
ಇಂದ್ರಚಾಪ ದರ್ಶನ.!
ಅನುಕ್ಷಣ ಅನೂಹ್ಯ
ಅನಿರೀಕ್ಷಿತಗಳ ಬಿಚ್ಚಿ
ಬೆಚ್ಚಿಸುವ ಸಂಚಲನ.!
ಅರಿವು ಅಧ್ಯಯನಗಳ
ಪರಿಧಿಗೆಂದು ನಿಲುಕದ
ಅನಂತತೆಯ ಸಂಕಲನ.!
ಬದುಕೆಂದರೆ ಎಂದಿಗೂ
ಪೂರ್ಣ ಅರ್ಥೈಸಲಾಗದ
ವಿಧಾತನ ವಿಸ್ಮಯ ಕವನ.!
-ಎ.ಎನ್.ರಮೇಶ್. ಗುಬ್ಬಿ.