ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೊಡ್ಡ ಗ್ರಾಮ, ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯ ದಾಖಲೆ ಹೊಂದಿರುವ ಸಿರಿಗೇರಿಗೆ ಶೀಘ್ರ ಪಟ್ಟಣ ಪಂಚಾಯಿತಿ ಸ್ಥಾನಮಾನ ದೊರಕಲಿದೆಯೇ?
ಹೌದು….ಈವರೆಗೆ ಗ್ರಾಮ ಪಂಚಾಯತಿಯಾಗಿದ್ದ ಸಿರಿಗೇರಿ ಇನ್ನೂ ಮುಂದೆ ಪಟ್ಟಣ ಪಂಚಾಯತಿಯಾಗಿ ಪರಿವರ್ತನೆಯಾಗಲಿದೆ..
ಸಿರಿಗೇರಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೇರಿಸಲು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಮಾಹಿತಿ ದೊರೆತಿದೆ.
ಬುಧವಾರ ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ಸಿರಿಗೇರಿ ಗ್ರಾಮಸ್ಥರ ನಿಯೋಗ ಬೆಂಗಳೂರಿನಲ್ಲಿ ಸಿಎಂ ಅವರನ್ನು ಭೇಟಿಯಾಗಿ ಮನವಿಗೆ ಸಲ್ಲಿಸಿದೆ.
ನಿಯೋಗ ಸಿರಿಗೇರಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದಾಗ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಆದರೆ ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಹಿನ್ನಲೆಯಲ್ಲಿ
ಶೀಘ್ರ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಮಾಹಿತಿಗಳು ದೃಢಪಡಿಸಿವೆ.
ನಿಯೋಗದಲ್ಲಿ ಸಿರುಗುಪ್ಪ ತಾಲೂಕು ಎಪಿಎಂಸಿ ಅಧ್ಯಕ್ಷ ಹಾಗಲೂರು ಯಲ್ಲನಗೌಡ, ಮುಖಂಡ ಜೆ.ಮಲ್ಲಿಕಾರ್ಜುನ ಗೌಡ, ತಾಲೂಕು ಕಸಾಪ ಅಧ್ಯಕ್ಷ ಎಸ್.ಎಂ.ನಾಗರಾಜ ಸ್ವಾಮಿ, ಎನ್.ವಿರೂಪಾಕ್ಷ ನಾಯಕ, ಗೋಡೆ ಸಂಪತ್ ಕುಮಾರ್, ಉಮೇಶ, ಯುವ ಮುಖಂಡ ಸಿ.ಶಿವರಾಮ್ ಮತ್ತಿತರರು ಇದ್ದರು.
*****