ಹೊಸಪೇಟೆ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ(ಬಿಡಿಸಿಸಿ) ಬ್ಯಾಂಕಿಗೆ ಶತಮಾನದ ಸಂಭ್ರಮ (12-12-1920 ರಿಂದ 12-12-2020)

ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಸಹಕಾರ ಬ್ಯಾಂಕ್ ಸ್ಥಾಪಿತವಾಗಿ ಇಂದಿಗೆ ಸರಿಯಾಗಿ ನೂರು ವರ್ಷ ವಾಯಿತು.   ಬ್ಯಾಂಕು ಡಿ.12, 1920ರಂದು ಸ್ಥಾಪನೆಯಾಗಿ
ಮುಂದೆ 1958 ನೇ ಸಾಲಿನಲ್ಲಿ ಕೇಂದ್ರ ಸರಕಾರದ ಯೋಜನೆಯನ್ವಯ ಪ್ರತಿ ಜಿಲ್ಲೆಗೆ ಸಹಕಾರ ಕೇಂದ್ರ ಬ್ಯಾಂಕು ಸ್ಥಾಪಿಸುವ ಉದ್ದೇಶದನ್ವಯ ದಿ. 09.09.1958ರಂದು ಉಪನಿಯಮಗಳ ತಿದ್ದುಪಡಿ ಮಾಡಿಕೊಳ್ಳುವ ಮೂಲಕ ಬ್ಯಾಂಕಿನ ಹೆಸರನ್ನು “ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು” ಎಂದು ಪರಿವರ್ತನೆಗೊಂಡಿತು.
ಅವಿಭಜಿತ ಬಳ್ಳಾರಿ ಜಿಲ್ಲೆಯ 11 ತಾಲೂಕುಗಳ ಕಾರ್ಯವ್ಯಾಪ್ತಿಯಲ್ಲಿ 33 ಶಾಖೆಗಳಲ್ಲಿ 225 ನೌಕರರು ಕಾರ್ಯನಿರ್ವಾಹಿಸುತ್ತಿದ್ದಾರೆ.
ಬ್ಯಾಂಕು ಕಳೆದ 44 ವರ್ಷಗಳಿಂದ ಸತತವಾಗಿ ಲಾಭದಲ್ಲಿರುವುದು ವಿಶೇಷ. ಪ್ರಸಕ್ತ 2019-20 ನೇ ಸಾಲಿನಲ್ಲಿ 2.74 ಕೋಟಿ ನಿವ್ವಳ ಲಾಭ ಗಳಿಸಿದೆ.
ಜಿಲ್ಲೆಯಲ್ಲಿ 174 ಬ್ಯಾಂಕಿಗೆ ಅದ್ಯರ್ಪಿತಗೊಂಡ ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರ ಸಂಘಗಳಿದ್ದು. ಇವುಗಳ ಮೂಲಕ ಜಿಲ್ಲೆಯ ಕಟ್ಟಕಡೆಯ ರೈತರಿಗೂ ರಾಜ್ಯ ಸರಕಾರ ಪ್ರಮುಖ ಯೋಜನೆಗಳಾದ ಶೂನ್ಯ ಬಡ್ಡಿದರ ಕೆಸಿಸಿ ಬೆಳೆಸಾಲ, ಹೈನುಗಾರಿಕೆ ಸಾಲ, ಮಧ್ಯಮಾವದಿ ಸಾಲಗಳ ಕೊಡುತ್ತ “ರೈತರ ಬ್ಯಾಂಕು” ಎಂದು ಹೆಸರುವಾಸಿಯಾಗಿರುವುದು ನಮ್ಮ ಹೆಮ್ಮೆ, ವಿಶೇಷವಾಗಿ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನಾಧಿರಿತ ಸಾಲ ಕೊಡುವುದರ ಮೂಲಕ ಜಿಲ್ಲೆಯ ಶಿಕ್ಷಕರು ಆರ್ಥಿಕವಾಗಿ ಸಬಲರಾಗಲು ನಮ್ಮ ಬ್ಯಾಂಕು ಕೂಡ ಕಾರಣ ಹಾಗಾಗಿ ಕೆಲವರು Teacher’s Bank ಎಂದು ಕರೆಯುವರು. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹೊಸ ಹೊಸ ಬದಲಾವಣೆಗೆ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಂಡು ,ಎ.ಟಿ.ಎಂ ಸೇವೆ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನ ಗ್ರಾಹಕರಿಗೆ ಒದಗಿಸಿದೆ. ಬ್ಯಾಂಕಿನ ಧ್ಯೇಯ ವಾಕ್ಯ ದಂತೆ “ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧಿಸುವ ಸಂಕಲ್ಪದೊಂದಿಗೆ ಸಹಕಾರ ತತ್ವಗಳಿಗನುಗುಣವಾಗಿ ಗ್ರಾಹಕರಿಗೆ ಸಕಾಲಕ್ಕೆ ಅಗತ್ಯ ಸಾಲದ ನೆರವು ಹಾಗೂ ಸೇವೆಗಳನ್ನು ಒದಗಿಸಿ ಆರ್ಥಿಕ ಸದೃಢ ಬ್ಯಾಂಕ್ ಆಗಿ ಇಂದು ರೂಪುಗೊಂಡು ಶತಮಾನಶೋತ್ಸವಕ್ಕೆ ಕಾಲಿಡುತ್ತಿರುವುದು ಜಿಲ್ಲೆಯ ಸಹಕಾರಿಗಳಿಗೆ ಹೆಮ್ಮೆಯ ಸಂತೋಷದ ವಿಷಯ , ಬ್ಯಾಂಕಿನ ಈ ಯಶ್ವಸಿ ಪಯಣಕ್ಕೆ ತಮ್ಮದೆ ಆದ ಕೊಡುಗೆ ನೀಡಿರುವ ಹಿಂದಿನ ಮತ್ತು ಇಂದಿನ ಬ್ಯಾಂಕಿನ ಎಲ್ಲ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು,ನಿರ್ದೇಶಕರುಗಳಿಗು ,
ಮುಖ್ಯಕಾರ್ಯನಿರ್ವಾಹಾಧಿಕಾರಿಗಳಿಗು,ಸಹಕಾರ ಇಲಾಖೆಯ ಅಧಿಕಾರಿಗಳಿಗು, ಸಹಕಾರಿ ಬ್ಯಾಂಕಿನಲ್ಲಿ ಸಹಕಾರಿ ಮನೋಭಾವದೊಂದಿಗೆ ಗ್ರಾಹಕರೊಂದಿಗೆ ವ್ಯವಹರಿಸುವ ಗುಣವನ್ನು ಬೆಳೆಸಿಕೊಂಡು ಬಂದಿದ್ದ ನಮ್ಮ ಪೂರ್ವಜರನ್ನು ಸ್ಮರಿಸುತ್ತ,ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸುತ್ತಿರುವ ಇಂದಿನ ಎಲ್ಲಾ ಬ್ಯಾಂಕಿನ ಸಿಬ್ಬಂದಿಗಳ ಸೇವೆಯನ್ನು ನೆನೆಯುತ್ತ ,ಮತ್ತು ನಮ್ಮ ಬ್ಯಾಂಕನ್ನು ಬೆಳೆಸಿದ ನಲ್ಮೆಯ ಗ್ರಾಹಕರಿಗೆಲ್ಲ ಕೋಟಿ ವಂದನೆಗಳು.
(ಈ ಬರಹ ಬಿಡಿಸಿಸಿ ಬ್ಯಾಂಕಿನ ಉದ್ಯೋಗಿ, ಕವಿ ಉಪನಾಯಕನಹಳ್ಳಿಯ ಕೊಟ್ರೇಶ ಅಕ್ಕಿ ಅವರದು)