ಕೌಲ್ ಬಜಾರ್ ಯುವಕ ಕಾಣೆ

ಬಳ್ಳಾರಿ:ನಗರದ ಕೌಲ್‍ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 30 ವರ್ಷದ ಜಿ.ನಾಗೇಶ್ ಎಂಬ ಯುವಕ ಡಿ.03 ರಿಂದ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಯುವಕನ ಚಹರೆ ಗುರುತುಗಳು : 5.8 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಕಪ್ಪು ಬಣ್ಣ, ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣದ ಕೂದಲು ಇರುತ್ತದೆ. ಈ ವ್ಯಕ್ತಿ ಕಾಣೆಯಾದ ಸಂದರ್ಭದಲ್ಲಿ ವೈಟ್ ಬಾಟಲ್ ಗ್ರೀನ್ ಶರ್ಟ್, ಶೈನಿಂಗ್ ಪ್ಯಾಂಟ್, ಕ್ರೀಮ್ ಕಲರ್ ಸ್ವೆಟರ್ , ಬ್ರೌನ್ ಕಲರ್ ಮಪ್ಲರ್‍ನ್ನು ಧರಿಸಿರುತ್ತಾನೆ.
ಈ ಯುವಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****