ಮೈಸೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೋಮವಾರ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಿತ್ತು.
ಮೈಸೂರು ಜಿಲ್ಕಾ ಉಸ್ತುವಾರಿ ಸಚಿವ ಎಸ್
ಟಿ. ಸೋಮಶೇಖರ್ ಮತ್ತು
ಶಾಸಕ ನಾಗೇಂದ್ರ ಅವರು ಸಮಿತಿಯ ನೂತನ ಸದಸ್ಯರಾದ ಎ. ಎಸ್. ನಾಗರಾಜ್, ಡಾ. ಸೌಗಂಧಿಕಾ ವಿ. ಜೋಯಿಸ್, ಡಾ. ಭೇರ್ಯ ರಾಂಕುಮಾರ್, ಡಾ. ವಿನೋದಮ್ಮ,ಗಿರೀಶ್, ಡಾ.ಮುಳ್ಳೂರು ನಾಗರಾಜ್, ಅರವಿಂದ ಶರ್ಮ, ಡಾ.ಎಂ.ಜಿ. ಆರ್ ಅರಸ್, ಸಾತನೂರ್ ದೇವರಾಜ್ ಮತ್ತು ಜೆ. ಬಿ. ರಂಗಸ್ವಾಮಿ ಅವರನ್ನು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ರಾಜೀವ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಗುಬ್ಬಿಗೂಡು ರಮೇಶ್ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ . ವೈ. ಡಿ.ರಾಜಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
*****