ಬಳ್ಳಾರಿ: ಹಾವೇರಿಯಲ್ಲಿ ಸಪ್ತ ಜಿಲ್ಲೆಗಳ ಛಲವಾದಿ ಸಮಾಜದ ಮುಖಂಡರ ಸಭೆ ಭಾನುವಾರ ಜರುಗಿತು.
ಸಮಾಜದ ಸಂಘಟನೆ, ಅಭಿವೃದ್ದಿ ಕುರಿತ ಸಮಾಲೋಚನಾ ಸಭೆಯಲ್ಲಿ
ಹಿರಿಯ ಶಾಸಕ ನೆಹರು ಓಲೇಕಾರ ಅವರು ಪಾಲ್ಗೊಂಡು ಸಮಾಜದ ಅಭಿವೃದ್ದಿ ಕುರಿತು ಏಳು ಜಿಲ್ಲೆಗಳ ಮುಖಂಡರ ಅಹವಾಲು, ಕುಂದುಕೊರತೆ, ಸಲಹೆಗಳನ್ನು ಆಲಿಸಿದರು.
ಶಿವಮೊಗ್ಗ, ಹಾವೇರಿ,ದಾವಣಗೇರಿ, ಧಾರವಾಡ ಸೆರಿದಂತೆ ಏಳು ಜಿಲ್ಲೆಗಳ ಸಮಾಜದ ಹಿರಿಯರು, ಯುವ ಮುಖಂಡರು ಉತ್ಸಾಹದಿಂದ ಸಭೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಛಲವಾದಿ ಮಹಾ ಸಭಾ ವತಿಯಿಂದ ನೆಹರು ಸಿ. ಓಲೇಕಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಎಂದು ಸಿಎಂಎಸ್ ಜಿಲ್ಲಾಧ್ಯಕ್ಷ ಸಿ. ನರಸಪ್ಪ ತಿಳಿಸಿದರು.
ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಮುಖಂಡರಾದ ಡಿ ಎಚ್ ಹನುಮೇಶಪ್ಪ, ಸಿ. ಸಿದ್ದಬಸಪ್ಪ, ಸಿ. ಶ್ರೀನಿವಾಸುಲು, ಕಮಲಾಪುರ ಸಣ್ಣೀರಪ್ಪ, ಸಿ. ಶಿವಕುಮಾರ್, ತೂಲಹಳ್ಳಿ ಹೆಚ್.ಅಜ್ಜಯ್ಯ, ಹರಪನಹಳ್ಳಿ ಕೆಂಚಪ್ಪ ಮತ್ತಿತರರು ಉಪಸ್ಥಿತರಿದ್ದರು ಎಂದು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಛಲವಾದಿ ಸಮಾಜದ ಸಂಘಟನೆ, ಅಭಿವೃದ್ಧಿ ಕುರಿತು ಸಮಾಲೋಚನಾ ಸಭೆ ಬಳ್ಳಾರಿಯಲ್ಲಿ ಏರ್ಪಡಿಸಲು ಚಿಂತನೆ ನಡೆದಿದೆ. ಈ ಸಭೆಗೆ ಸಮಾಜದ ಗಣ್ಯರು, ಹಿರಿಯ ಶಾಸಕ ನೆಹರು ಓಲೇಕಾರ ಅವರು ಪಾಲ್ಗೊಳ್ಳಲು ಒಪ್ಪಿದ್ದಾರೆ ಎಂದು ನರಸಪ್ಪ ತಿಳಿಸಿದರು.