ಕೂಡ್ಲಿಗಿ: ಬೆಂಗಳೂರಿನಿಂದ ಮಾನ್ವಿ ಕಡೆಗೆ ಹೊರಟಿದ್ದ ಕಾರೊಂದು ಪಲ್ಟಿಯಾಗಿ ಮೂವರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಸುಕಿನ ಜಾವ ಪಟ್ಟಣದ ಹೊರವಲಯದ ಕೊಟ್ಟೂರು ರಸ್ತೆಯ ಹೈವೇ 50ರ ಪ್ಲೈ ಓವರ್ ಮೇಲೆ ಸಂಭವಿಸಿದೆ. ಮಾನ್ವಿ ಕಡೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಗೋಡೆಗೆ ಡಿಕ್ಕಿ ಹೊಡೆದ ನಂತರ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ಬು ಕೂಡ್ಲಿಗಿ ಆಸ್ಪತ್ರೆಗೆ ಹೈವೇ ಪೆಟ್ರೋಲಿಂಗ್ ನಲ್ಲಿ ಕರೆತರುತ್ತಿದ್ದರು. ಆದರೆ ಗಾಯಾಳುಗಳು ಹೆಚ್ಚಿನ ಚಿಕಿತ್ಸೆಯನ್ನು ಹೊಸಪೇಟೆ ಆಸ್ಪತ್ರೆಯಲ್ಲಿ ಪಡೆಯುವುದಾಗಿ ಹೇಳಿದ್ದರಿಂದ ಅವರನ್ನು ಬಸ್ ಮೂಲಕ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಾಯಾಳುಗಳ ಹೆಸರು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಪಡೆಯುತ್ತಿದ್ದಾರೆ. ಪಲ್ಟಿಯಾದ ಕಾರು ಕೂಡ್ಲಿಗಿ ಪೊಲೀಸ್ ಠಾಣಾ ಆವರಣಕ್ಕೆ ತರಲಾಗಿದೆ.