ಬಳ್ಳಾರಿ: ಕೋವಿದ್ ನಿಂದ ಇತ್ತೀಚಿಗೆ ನಿಧನರಾದ ಕೂಡ್ಲಿಗಿ ತಾಲೂಕು ಹೊಸದಿಗಂತ ದಿನ ಪತ್ರಿಕೆಯ ವರದಿಗಾರ ತ್ರಿಮೂರ್ತಿಯವರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ ನೀಡಿ ಕುಟುಂದ ಸದಸ್ಯರಿಗೆ ಸಾಂತ್ವನ ಹೇಳಿದರು.
ವೃದ್ಧ ತಂದೆ ತಾಯಿಗಳಿಗೆ ಸಾಂತ್ವನ ಹೇಳಿದ ಅಧ್ಯಕ್ಷರು ನಿಮ್ಮ ಜತೆ ನಮ್ಮ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವಿದೆ ಎಂದು ಆತ್ಮ ಸ್ಥೈರ್ಯ ತುಂಬಿದರು. 5ಲಕ್ಷ ರೂ. ಪರಿಹಾರವನ್ನು ಸಿಎಂ ಅವರು ಘೋಷಿಸಿದ್ದಾರೆ. ಈ ಕುರಿತು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಚಾರಿಸುವುದಾಗಿ ತಿಳಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ,ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ,ಜಿಲ್ಲಾಕಾರ್ಯದರ್ಶಿ ಭೀಮಣ್ಣಗಜಾಪುರ್, ಜಯವಾಣಿ ಸಂಪಾದಕ ಹುಡೆಂ ಕೃಷ್ಣಮೂರ್ತಿ,ಸಂಜೆವಾಣಿ ವರದಿಗಾರ ನಾಗರಾಜ್, ಮಂಜುನಾಥ ಮಯೂರ ಮತ್ತಿತರರು ಇದ್ದರು.