ಬೆಂಗಳೂರು: ಸೈರೋಸ್ –ಕರ್ನಾಟಕ ಸಂಸ್ಥೆಯ ರಾಜ್ಯಮಟ್ಟದ ಮೊದಲ ಸಮಾವೇಶವನ್ನು ಬರುವ ಜ.9ರಂದು ಗದಗದಲ್ಲಿ ಆಯೋಜಿಸಲಾಗಿದೆ.
ಸಮಾವೇಶದ ಅಂಗವಾಗಿ ತಳಸಮುದಾಯಗಳಿಗೆ ಗುಣಾತ್ಮಕ ಶಿಕ್ಷಣದೆಡೆಗೆ ನಮ್ಮ ನಡಿಗೆ ಅಡಿಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
“ತಳಸಮುದಾಯಗಳ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ” ಈ ವಿಷಯದಲ್ಲಿ ಪ್ರಬಂಧ ರಚಿಸಬೇಕು ಎಂದು ಸಂಸ್ಥೆಯ ಡಾ.ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಸೂಚನೆಗಳು: ಪ್ರಬಂಧವನ್ನು ಬರವಣಿಗೆ ಅಥವಾ ಟೈಪ್ ಮಾಡಿ ಕಳುಹಿಸಬೇಕು.
ಕಳುಹಿಸಿಕೊಡುವ ಪ್ರಬಂಧಗಳು ಕನಿಷ್ಠ 4000 ಪದಗಳು ಅಥವಾ ಗರಿಷ್ಠ 6000 ಪದಗಳ ಮಿತಿಯಲ್ಲಿರಬೇಕು. (ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ)
ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಸ್ವಂತ ಬರವಣಿಗೆಯ ಪ್ರಬಂಧ ಆಗಿರಬೇಕು. ಯಾವುದೇ ಕಾರಣಕ್ಕೂ ಇತರರು ಬರೆದಿರುವ ಪ್ರಬಂಧಗಳ ನಕಲು ಮಾಡಿದ್ದರೆ ಪ್ರಬಂಧಗಳನ್ನು ಸ್ಪರ್ಧೆಯಿಂದ ಹೊರಗಿಡಲಾಗುವುದು.
ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಪುಟದಲ್ಲಿ ನಮೂದಿಸಬೇಕು. ವಯೋಮಾನ ದೃಡೀಕರಣಕ್ಕೆ ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ, ಆಧಾರ್ ಕಾರ್ಡ್ ಪ್ರತಿ ಲಗತ್ತಿಸುವುದು ಕಡ್ಡಾಯ.
ಆಯ್ಕೆಯಾದ ವಿಜೇತರಿಗೆ ಸೈರೋಸ್ -ಕರ್ನಾಟಕ ರಾಜ್ಯಮಟ್ಟದ ಮೊದಲ ಸಮಾವೇಶ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪ್ರಬಂಧ ಸಲ್ಲಿಸಲು ಕೊನೆಯ ದಿನಾಂಕ: 04/01/2021. ಕೊನೆಯ ದಿನಾಂಕದ ನಂತರ ಬಂದ ಪ್ರಬಂಧಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಧೆಗೆ ಪರಿಗಣಿಸುವುದಿಲ್ಲ.
ಪ್ರಬಂಧ ಕಳುಹಿಸುವ ವಿಳಾಸ: ತಳಸಮುದಾಯಗಳ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ಭಾರತದ ವಿಶ್ವವಿದ್ಯಾಲಯ, ನಾಗರಬಾವಿ, ಬೆಂಗಳೂರು 560072, ಅಥವಾ swaeroes.k@gmail.com
ತೀರ್ಪುಗಾರರ ತೀರ್ಮಾನವೇ ಅಂತಿಮ.
ಪ್ರಶಸ್ತಿ ಪ್ರದಾನ ಸಮಾರಂಭ ಗದಗಿನಲ್ಲಿ ಜ.9, 2021ರಂದು ನಡೆಯಲಿದೆ.
ಪ್ರಬಂಧ ಸ್ಪರ್ಧೆ ವಿವಿಧ ಹಂತಗಳಲ್ಲಿ ನಡೆಯಲಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ಪಿಯುಸಿ ವಿದ್ಯಾರ್ಥಿಗಳಿಗೆ, ಪದವಿ ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಮಂಜುಳಾ 9480064312, ಡಾ ಪ್ರಿಯದರ್ಶಿನಿ 8147464051, ವೀರಪ್ಪ 9880515023 ಅವರನ್ನು ಸಂಪರ್ಕಿಸಲು ಕೋರಲಾಗಿದೆ.