ಬಳ್ಳಾರಿ: ನಗರದ ಆರ್ ಟಿ ಓ ಕಛೇರಿ ಎಫ್‌ಡಿಎ ಮತ್ತು ಏಜೆಂಟ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮೃತ ಪಾರ್ಥಸಾರಥಿ ಅವರ ಕಾರನ್ನು ಅವರ ಪತ್ನಿ ಹರಿಪ್ರಿಯ ಅವರ ಹೆಸರಿಗೆ ಬದಲಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಮಂಜುನಾಥ 1500 ರೂ ಲಂಚ ಕೊಡುವಂತೆ ಏಜೆಂಟ್ ಅಜೀಮ್ ಅವರ ಮೂಲಕ ಕೇಳಿದ್ದರು.
ಈ ಬಗ್ಗೆ ಮಹಮ್ಮದ್ ಫರ್ಕಾನ್ ಎಸಿಬಿಗೆ ದೂರು ನೀಡಿದ್ದರು. ಗುರುವಾರ 700 ರೂ. ನೀಡುವಾಗ ಎಸಿಬಿ ಅಧಿಕಾರಿಗಳು ಹಣ ಸಮೇತ ಮಂಜುನಾಥ ಮತ್ತು ಅಜೀಮ್ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ತಿಳಿಸಿದ್ದಾರೆ.