ಬಳ್ಳಾರಿ ಟು ದೆಹಲಿ, ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಯಾಗಿ ಡಿಸಿ ನಕುಲ್ ನಿಯೋಜನೆ

ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಕೇಂದ್ರ‌ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜನೆಗೊಂಡಿದ್ದಾರೆ.
ತಾವು ಕಾರ್ಯನಿರ್ವಹಿಸಿದ ಸ್ಥಳಗಳಲ್ಲಿ ತಮ್ಮ ದಕ್ಷ ಆಡಳಿತ, ಕಾರ್ಯ ನಿರ್ವಹಣೆ ಯಿಂದ ಗಮನ ಸೆಳೆದಿದ್ದ ನಕುಲ್ ಅವರು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಪತ್ನಿ ಅವರ ಚೊಚ್ಚಲ ಹೆರಿಗೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಇತರೆ ಉನ್ನತಾಧಿಕಾರಿಗಳಿಗೂ ಪ್ರೇರಣೆಯಾಗಿದ್ದರು.
ಮೂಲತಃ ಮಡಿಕೇರಿಯವರಾದ ನಕುಲ್ ಬಿಇ ಪದವೀಧರರು. ಮೈಸೂರಿನಲ್ಲಿ ತಮ್ಮ ಬಿಇ ಪದವಿ ಪೂರೈಸಿದ ಬಳಿಕ 2010ರಲ್ಲಿ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತಮ‌ ಸಾಧನೆ 31 ನೇ ರ್ಯಾಂಕ್ ಮೂಲಕ ಕರ್ನಾಟಕದ ಐಎಎಸ್ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದರು.