ಹೊಸಪೇಟೆ: ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮ ಯೋಜನೆ ಅಡಿಯಲ್ಲಿ 2.35ಕೋಟಿ ರೂ.ವೆಚ್ಚದ ನಗರದ ಮೌಲಾನಾ ಆಜಾದ್ ಶಾಲೆಯ ನೆಲಮಹಡಿ ಮತ್ತು ಮೊದಲನೇ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ತಾ.ಪಂ. ಅಧ್ಯಕ್ಷೆ ನಾಗವೇಣಿ ಬಸವರಾಜ್, ಹುಡಾ ಅಧ್ಯಕ್ಷರಾದ ಅಶೋಕ್ ಜೀರೆ ಅವರು ಬುಧವಾರ ಚಾಲನೆ ನೀಡಿದರು.
ಹೊಸಪೇಟೆಯ ಜಂಬುನಾಥ ರಸ್ತೆಯ ಆದರ್ಶ ಶಾಲೆಯ ಹತ್ತಿರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಮನ್ಸೂರ್ ಅಲಿ, ಮುಖಂಡರಾದ ಧರ್ಮೇಂದ್ರ ಸಿಂಗ್, ಅಯ್ಯಾಳಿ ತಿಮ್ಮಪ್ಪ, ಬಸವರಾಜ್ ನಾಲತ್ವಾಡ್, ಟಿಂಕರ್ ರಫೀಕ್, ಅಲ್ಪ ಸಂಖ್ಯಾತರ ಇಲಾಖೆಯ ಅಧಿಕಾರಿ ಪರಶುರಾಮ, ನಿರ್ಮಿತಿ ಕೇಂದ್ರದ ಅಧಿಕಾರಿ ರಂಗರಾಜ್ ಮತ್ತಿತರರು ಉಪಸ್ಥಿತರಿದ್ದರು..