ಕೂಡ್ಲಿಗಿ: ನಾಳೆ ನಡೆಯುವ ಗ್ರಾ. ಪಂ. ಚುನಾವಣೆಗೆ ಸಕಲ ಸಿದ್ಧತೆ -ಮತದಾನಕ್ಕೆ ಕ್ಷಣಗಣನೆ.

ಕೂಡ್ಲಿಗಿ: ನಾಳೆ ಗ್ರಾ. ಪಂ. ಚುನಾವಣೆ. ಸಕಲ ಸಿದ್ಧತೆ -ಮತದಾನಕ್ಕೆ ಕ್ಷಣಗಣನೆ. ಕೂಡ್ಲಿಗಿ: ತಾಲೂಕಿನಲ್ಲಿ ಗ್ರಾಮ ಪಂಚಾಯತಿಯ ಚುನಾವಣಾ ಮತದಾನಕ್ಕೆ ಕೆಲವೇ ಗಂಟೆಗಳ ಬಾಕಿ ಇದ್ದು, ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಳಸಿಕೊಂಡು ಶಾಂತಿಯುತ ಚುನಾವಣೆ ನಡೆಸಲು ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಕೂಡ್ಲಿಗಿ ತಾಲೂಕು ಚುನಾವಣಾಧಿಕಾರಿ ಮಹಾಬಲೇಶ್ವರ ಅವರು ತಿಳಿಸಿದ್ದಾರೆ. ಶನಿವಾರ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ನಾಳೆ ನಡೆಯುವ ಗ್ರಾಮಪಂಚಾಯಿತಿ ಚುನಾವಣೆ ಮತದಾನ ಪ್ರಕ್ರಿಯೆಗೆ 207 ಮತಗಟ್ಟೆಗೆ 228 ಪಿ ಆರ್ ಓ, 228ಎ ಪಿ ಆರ್ ಓ, 456ಪಿ ಓ, 207 ಡಿ ಗ್ರೂಪ್ ಮತ್ತು 207ಪೊಲೀಸ್ ಸಿಬ್ಬಂದಿಗಳನ್ನು ಮತಗಟ್ಟೆ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿದೆ ಎಂದು ಹೇಳಿದರು. ಭಾನುವಾರ ಬೆಳಿಗ್ಗೆ 7ಗಂಟೆಯಿಂದ ಸಂಜೆ 5ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ತಾಲೂಕಿನ ಒಟ್ಟು 482 ಸ್ಥಾನಗಳಲ್ಲಿ 95 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಇನ್ನುಳಿದ 387 ಸ್ಥಾನಗಳಿಗೆ 149 ಕ್ಷೇತ್ರದಲ್ಲಿ 207 ಮತಗಟ್ಟೆಗಳಲ್ಲಿ 1, 40, 210 ಮತದಾರರು ಮತ ಚಲಾಯಿಸಲಿದ್ದಾರೆ. ಒಂದು ಬೂತಿಗೆ ಪಿ ಆರ್ ಓ, ಎ ಪಿ ಆರ್ ಓ, ಪಿ ಓ 1, ಪಿ ಓ 2, ಡಿ ಗ್ರೂಪ್ 1, ಒಬ್ಬ ಪೊಲೀಸ್ ಸಿಬ್ಬಂದಿಗಳನ್ನು ನಾಳೆ ನಡೆಯುವ ಚುನಾವಣೆಗೆ ನಿಯೋಜಿಸಿ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ವಾಹನಗಳ ಬಳಕೆ : ಕೂಡ್ಲಿಗಿ ಸಾರಿಗೆ ಸಂಸ್ಥೆ ಘಟಕದಿಂದ ಕೂಡ್ಲಿಗಿ ತಾಲೂಕಿನ ಗ್ರಾಮಪಂಚಾಯಿತಿ ಚುನಾವಣೆಗೆ 41ಬಸ್ಸುಗಳನ್ನು ತೆಗೆದುಕೊಳ್ಳಲಾಗಿದ್ದು 4ಮಿನಿ ಬಸ್ಸು, 2ಟ್ರ್ಯಾಕ್ಸ್ ಹಾಗೂ 12 ಸೆಕ್ಟರ್ ಅಧಿಕಾರಿಗಳಿಗೆ 12 ವಾಹನಗಳನ್ನು ಚುನಾವಣೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸ್ ಬಂದೋಬಸ್ತ್ : ಭಾನುವಾರ ನಡೆಯುವ ಚುನಾವಣೆಯಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಸೇರಿದಂತೆ ಸಾಮಾನ್ಯ ಮತಗಟ್ಟೆ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಲು ಪೊಲೀಸರು ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಂಡಿದ್ದಾರೆ.
ಡಿ ವೈ ಎಸ್ ಪಿ ಅವರ ನೇತೃತ್ವದಲ್ಲಿ 5ಜನ ಸಿಪಿಐಗಳು, 8ಜನ ಪಿಎಸ್ಐಗಳು,
32ಎಎಸ್ ಐ, 55ಮುಖ್ಯಪೇದೆ, 155ಪೇದೆಗಳು, 83ಗೃಹರಕ್ಷಕರು, 1ಐ ಆರ್ ಹಾಗೂ ಡಿ ಎ ಆರ್ ತುಕಡಿ ಬಳಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.