ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರಿಗೆ ಸಿಎಂ ಅವರಿಂದ ಹೃದಯ ಸ್ಪರ್ಶಿ ಸನ್ಮಾನ

ಬೆಂಗಳೂರು: ಮಾಸಾಂತ್ಯಕ್ಕೆ ಸೇವಾ ನಿವೃತ್ತಿ ಆಗಲಿರುವ ಮುಖ್ಯ ಕಾರ್ಯದರ್ಶಿ ತ.ಮ..ವಿಜಯಭಾಸ್ಕರ್ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಸೋಮವಾರ ವಿಧಾನಸೌಧದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವಿಜಯಭಾಸ್ಕರ್ ಅವರನ್ನು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸೌದಿ, ಡಾ. ಅಶ್ವತ್ಥನಾರಾಯಣ, ಹಿರಿಯ ಸಚಿವ ಜಗದೀಶ ಶೆಟ್ಟರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.